VIDEO : ದೊಡ್ಡಪ್ಪ ಮನೆಗೆ ಬಂದು ನನ್ನ ಬೈಯುತ್ತಾರೆ -ಉಮೇಶ್ ಕತ್ತಿ ನೆನೆದು ಪೃತ್ವಿ ಕತ್ತಿ ಭಾವುಕ
ಹುಕ್ಕೇರಿ : ದೊಡ್ಡಪ್ಪ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ಕತ್ತಿ ಕುಟುಂಬಕ್ಕೆ ಬರಸಿಡಿಲು ಹೊಡೆದಂತಾಗಿದ್ದು, ಸಹೋದರ ರಮೇಶ್ ಕತ್ತಿ ಮಗ ಪೃತ್ವಿ ಕತ್ತಿ ದೊಡ್ಡಪ್ಪನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಸಹೋದರ ರಮೇಶ್ ಕತ್ತಿ ಮಗ ಪೃಥ್ವಿ ಕತ್ತಿ ದೊಡ್ಡಪ್ಪ ಉಮೇಶ್ ಕತ್ತಿ ಅವರ ಪ್ರೀತಿಯ ಮಗನಲ್ಲಿ ಒಬ್ಬರು. ಯಾವಾಗಲೂ ಪ್ರೀತಿಯ ಬೈಗುಳದಿಂದ ಸಂತೋಷವಾಗಿರುತ್ತಿದ್ದ ಪೃಥ್ವಿ ಅವರಿಗೆ ದೊಡ್ಡಪ್ಪನ ಸಾವು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ದೊಡ್ಡಪ್ಪ ವಾಪಸ್ ಬರುತ್ತಾರೆ ಎಂಬ ನಂಬಿಕೆ ಇದೆ. ಅವರನ್ನು ಕಳೆದುಕೊಳ್ಳಲು ಆಗುತ್ತಿಲ್ಲ ಎಂದು ಮಗ ಪೃಥ್ವಿ ರೋಧಿಸುತ್ತಿರುವುದು ನೋಡುಗರಲ್ಲಿ ಸಂಕಟ ಮೂಡಿಸುತ್ತದೆ.