
ಬರವಸೆಯ ಬೆಳಕು – “ಮತ್ತೆ ಹಾಡಿತು ಕೋಗಿಲೆ”

ನಾವು ನಮ್ಮ ಜೀವನದಲ್ಲಿ ಇಲ್ಲಿವರೆಗೂ ಹಲವಾರು ಸಾಧಕರ ಬಗ್ಗೆ ಕೇಳಿದೀವಿ ಓದಿದಿವಿ .. ಡಾ ರಾಜಕುಮಾರ ಅವರಿರಬಹುದು, ರತನ್ ಟಾಟಾ ಅವರಿರಬಹುದು, ರಜನಿಕಾಂತ್ ಅವರಿರಬಹುದು, ಸುಧಾಮೂರ್ತಿ ಅವರಿರಬಹುದು.ಹೀಗೆ ನಮಗೆ ಗೊತ್ತಿರುವ ಸೆಲೆಬ್ರಿಟಿ ಸಾಧಕರು ಸಾಕಷ್ಟು ಇದಾರೆ.. ಆದರೆ ನಮಗೆ ಗೊತ್ತಿಲದಿರುವ ಸಾಕಷ್ಟು ಸಾಧಕರು ನಮ್ಮ ಸುತ್ತಮುತ್ತ ಇದಾರೆ..ಅಂತಹ ಅಪರೂಪದ ಸಾಧಕರನ್ನ ಹೆಕ್ಕಿ ತಂದ್ದು ಅವರನ್ನ ಪರಿಚಯಿಸಿ..ನಮ್ಮ ಎದೆಯಲ್ಲೂ ಒಂದಿಷ್ಟು ಸಾಧನೆಗಾಗಿ ಕಿಚ್ಚು ಹೊತ್ತಿಸುವ ಪುಸ್ತಕವೇ “ಮತ್ತೆ ಹಾಡಿತು ಕೋಗಿಲೆ”
ಪೆಟ್ಟಿ ಅಂಗಡಿಯಾತನ ಮಗಳು ಐಎಎಸ್ ಆದ್ ಸಾಧನೆಯ ಕಥೆ, 50 ಪೈಸೆಯ ಶಾಂಪೂ ಮಾರಿ 500 ಕೋಟಿ ದುಡಿದ ಚಿಕ್ ಶಾಂಪೂ ಕಂಪನಿಯ ಮಾಲೀಕನ ಜಗ ಮೆಚ್ಚುವ ಕಥೆ, ಪಿಯುಸಿ ಫೇಲಾದ್ರು 1000 ಜನಕ್ಕೆ ಕೆಲಸ ಕೊಡಿಸಿ ತನ್ನ ಸಾಧನೆಯನ್ನ ಬಿಬಿಸಿಯು ಗುರುತಿಸುವಂತೆ ಮಾಡಿಕೊಂಡಾತನ ಕಥೆ
ಆಸಿಡ್ ಬಿದ್ದು ಕಣ್ಣು ಹೋದ್ರೂ, ಅಂಜದೆ ಮಾಡೆಲ್ ಆದ ಧೀರ ಹೆಣ್ಣ್ಮಗಳ ಕಥೆ, ಗೆಳೆಯರನ್ನ ಮರೆಯಬಾರದು ಎಂದೂ ಹೇಳುವ ಸ್ನೇಹದ ಮಹತ್ವ ಸಾರುವ ಕಥೆ
ಇಲ್ಲಿರುವ ಲೇಖನಗಳು ಯಾವು ಕೂಡಾ ಕಾಲ್ಪನಿಕವಲ್ಲ ನಿಜ ಜೀವನದಲ್ಲಿ ನಡೆದ ಕಥೆಗಳೇ ಈ ಪುಸ್ತಕದ ಲೇಖನಗಳು.ಹೀಗೆ ಒಂದಲ್ಲಾ ಎರಡಲ್ಲ ಬರೋಬ್ಬರಿ 31 ಲೇಖನಗಳನ್ನು ಒಳಗೊಂಡಿಗಿರುವ, ಸ್ಫೂರ್ತಿ ತುಂಬುವ ಪುಸ್ತಕ “ಮತ್ತೆ ಹಾಡಿತು ಕೋಗಿಲೆ”
ಕೆಲಸದ ಒತ್ತಡದಿಂದ ಸರಿಯಾಗಿ ಓದೋಕೆ ಸಮಯ ಸಿಗದೇ ಈ ಹಿಂದೆ ಪುಸ್ತಕ ತರಿಸಿಕೊಂಡಾಗ 5-6 ಲೇಖನಗಳನಷ್ಟೇ ಓದಿ ಮುಗಿಸಿದೆ..ಉಳಿದ ಲೇಖನಗಳನ್ನು ನಿನ್ನೆ ಓದಬೇಕೆಂದು ಪುಸ್ತಕವನ್ನ ಕೈಗೆ ತೆಗೆದುಕೊಂಡಾಗ ಸಮಯ ರಾತ್ರಿ 11.30.. ಸಂಪೂರ್ಣ ಪುಸ್ತಕ ಓದಿ ಮುಗಿಸಿದಾಗ ಸಮಯ ಮಧ್ಯರಾತ್ರಿ ಎರಡು ಗಂಟೆ.
ವೀಕೆಂಡ್ ವಿಥ್ ರಮೇಶ್ ಶೋ ನೋಡ್ಬೇಕ ಆದ್ರೆ ಸಾಧಕರ ಸಾಧನೆ ನೋಡುತ್ತಾ ಹೇಗೆ ಒಂದಿಷ್ಟು ಅಗಲದೇ ಕುರ್ಚಿಗೆ ಒತ್ತಿ ಕುಳಿತು ಬಿಡ್ತೀದ್ವೋ ಹಾಗೆಯೇ ನಿನ್ನೆ ರಾತ್ರಿ “ಮತ್ತೆ ಹಾಡಿತು ಕೋಗಿಲೆ” ಪುಸ್ತಕ ಓದುವಾಗ ನನಗಾದ ಅನುಭವ. ಇಲ್ಲಿ ಕೊಟ್ಟಿರುವ ಒಬ್ಬೊಬ್ಬ ಸಾಧಕರ ಕಥೆಯು ನಮ್ಮಲ್ಲೊಂದು ಹೊಸದಾದ ಉತ್ಸಾಹವನ್ನ ತುಂಬಿ ನಾವು ಏನಾದರೂ ಸಾಧನೆ ಮಾಡಿಯೇ ಈ ಭೂಮಿಯಿಂದ ನಿರ್ಗಮಿಸಬೇಕು ಏನಿಸುವಂತೆ ಮಾಡುತ್ತವೆ.
ಮಣಿಕಾಂತ ಸರ್ ಅವರ ಮುಂದಿನ ಪುಸ್ತಕದ ಒಂದು ಲೇಖನದಲ್ಲಿನ ಕಥಾನಾಯಕ/ನಾಯಕಿ ನಾವು ಆಗಬೇಕು.. ಹಾಗೇನಾದರೂ ವಿಶಿಷ್ಟವಾದ ಸಾಧನೆ ಮಾಡುವ ಉತ್ತೇಜನವನ್ನ ಕೊಡುತ್ತೆ ನಮ್ಮೆಲ್ಲರ “ಮತ್ತೆ ಹಾಡಿತು ಕೋಗಿಲೆ”
✍️ಪ್ರಕಾಶ್ ತೋಟಗೇರ