Select Page

Advertisement

ನಾಳೆ ಬೆಳಗಾವಿಗೆ ರಾಜಾಹುಲಿ ಜೊತೆ ಜಗದೀಶ್ ಶೆಟ್ಟರ್ ಆಗಮನ

ನಾಳೆ ಬೆಳಗಾವಿಗೆ ರಾಜಾಹುಲಿ ಜೊತೆ ಜಗದೀಶ್ ಶೆಟ್ಟರ್ ಆಗಮನ

ಬೆಳಗಾವಿ : ಗೋ ಬ್ಯಾಕ್ ಜಗದೀಶ್ ಶೆಟ್ಟರ್ ಅಭಿಯಾನದ ಮೂಲಕ ಆಕ್ರೋಶ ಹೊರಹಾಕುತ್ತಿರುವ ಟಿಕೆಟ್ ವಂಚಿತ ಬೆಳಗಾವಿ ಜಿಲ್ಲಾ ನಾಯಕರ ಮನವೊಲಿಸಲು ಸ್ವತಃ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬುಧವಾರ ಬೆಳಗಾವಿಗೆ ಆಗಮಿಸಲಿದ್ದಾರೆ.

ಬೆಳಗಾವಿ ಟಿಕೆಟ್ ಘೋಷಣೆ ನಂತರದಲ್ಲಿ ಮೊದಲಬಾರಿಗೆ ಬೆಳಗಾವಿ ಭೇಟಿ ನೀಡುತ್ತಿರುವ ಜಗದೀಶ್ ಶೆಟ್ಟರ್ ಅವರಿಗೆ ಯಡಿಯೂರಪ್ಪ ಜೊತೆ ನಿಲ್ಲಲಿದ್ದಾರೆ. ಈಗಾಗಲೇ ಟಿಕೆಟ್ ವಂಚಿತ ಬಿಜೆಪಿ ನಾಯಕರು ಶೆಟ್ಟರ್ ವಿರುದ್ಧ ಗೋ ಬ್ಯಾಕ್ ಅಸ್ತ್ರ ಪ್ರಯೋಗಿಸಿದ್ದರು. ಈ ಹಿನ್ನಲೆಯಲ್ಲಿ ಪಕ್ಷದ ಒಳಜಗಳ ಬಗೆಹರಿಸಲು ಸ್ವತಃ ಯಡಿಯೂರಪ್ಪ ಅವರೇ ಅಖಾಡಕ್ಕೆ ಇಳಿದಿದ್ದಾರೆ.

ಇಬ್ಬರು ನಾಯಕರಿಗೆ ಹಿರೇಬಾಗೇವಾಡಿ ಗ್ರಾಮದಲ್ಲಿ ಅದ್ಧೂರಿ ಸ್ವಾಗತಕ್ಕೆ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಾದ ನಂತರದಲ್ಲಿ ನಗರದ ಹಲವು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಂತರ ಪಕ್ಷದ ಕಚೇರಿಗೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಪ್ರಕಟಣೆ ಹೊರಡಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!