
ಕತ್ತಿ ಕುಟುಂಬಕ್ಕೆ ಬಿಗ್ ಶಾಕ್, ಜಾರಕಿಹೊಳಿ ಕುಟುಂಬದತ್ತ ವಾಲಿದ ಹುಕ್ಕೇರಿ ಬಜಾರ್ ಪೇಟೆ ಗಣ್ಯ ವ್ಯಾಪಾರಸ್ಥರು

ಹುಕ್ಕೇರಿ : ಪ್ರತಿಷ್ಠಿತ ಕತ್ತಿ ಕುಟುಂಬಕ್ಕೆ ಅತ್ಯಾಪ್ತವಾಗಿದ್ದ ಹುಕ್ಕೇರಿ ಪಟ್ಟಣದ ಬಜಾರ್ ಪೇಟೆಯ ಎಲ್ಲ ಗಣ್ಯ ವ್ಯಾಪಾರಸ್ಥರು ಗೋಕಾಕ ಪಟ್ಟಣಕ್ಕೆ ತೆರಳಿ ಲಖನ್ ಜಾರಕಿಹೊಳಿ ಅವರನ್ನ ಭೇಟಿ ಆಗಿದ್ದು ಅಚ್ಚರಿಗೆ ಕಾರಣವಾಗಿದೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನ ಬಹಿರಂಗವಾಗಿಯೇ ವಿರೋಧ ಮಾಡಿ ಬಿಜೆಪಿ ಬೆಂಬಲಿಸುವಂತೆ ಬಜಾರ್ ಪೇಟೆಯ ಬಹುತೇಕ ಗಣ್ಯ ವ್ಯಾಪಾರಸ್ಥರು ಪ್ರಚಾರ ಮಾಡಿದ್ದರು.
ಆದರೆ ಖಾಸಗಿ ಶಾಲೆಯ ವಿಚಾರಕ್ಕೆ ಸಂಭಂದಿಸಿದಂತೆ ಬಜಾರ್ ಪೇಟೆಯ ಪ್ರತಿಷ್ಠಿತ ಕುಟುಂಬಗಳಲ್ಲಿ ಬಿರುಕು ಬಿಟ್ಟಿರುವ ಕಾರಣ ಈಗ ಬಹುತೇಕ ಗಣ್ಯ ವ್ಯಾಪಾರಸ್ಥರು ಲಖನ್ ಜಾರಕಿಹೊಳಿ ಅವರನ್ನ ಭೇಟಿ ಆಗಿ ಜಾರಕಿಹೊಳಿ ಕುಟುಂಬದೊಂದಿಗೆ ನಾವಿದ್ದೀವಿ ಎಂದು ಸಂದೇಶ ಸಾರಲಾಗಿದೆ.
ಹುಕ್ಕೇರಿ ಪಟ್ಟಣದಲ್ಲಿ ಇತ್ತಿಚೆಗೆ ಶಾಲಾ ದಾಖಲಾತಿ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯ ಮಾಡಿದ್ದಾರೆ ಈ ಕಾರಣ ಭೇಟಿ ಆಗಿದ್ದೇವೆ ಎನ್ನುವ ಮಾತುಗಳು ಕೆಲ ವ್ಯಾಪರಸ್ಥರದ್ದಾಗಿದೆ.
ಇಂಥ ಪ್ರಕರಣಗಳಲ್ಲಿ ಮೊದಲು ಮಾಜಿ ಸಂಸದ ರಮೇಶ ಕತ್ತಿ ಮಂಗಳವಾರ ಹಾಗೂ ಶನಿವಾರ ಪಂಚಕಿ ಮಾಡಿ ಇತ್ಯರ್ಥಗೊಳಿಸುತ್ತಿದ್ದರು ಆದರೆ ರಮೇಶ ಕತ್ತಿ ಅವರನ್ನ ಬಿಟ್ಟು ಲಖನ ಜಾರಕಿಹೊಳಿ ಅವರನ್ನ 30 ಕ್ಕೂ ಹೆಚ್ಚು ಗಣ್ಯ ವ್ಯಾಪಾರಸ್ಥರು ಭೇಟಿ ಆಗಿದ್ದು ಅಚ್ಚರಿಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ರಾಜು ಪಟ್ಟಣಶೆಟ್ಟಿ, ಅಪುಶ ತುಬಚಿ, ಸುಹಾಸ ನೂಲಿ, ಆನಂದ ಪಟ್ಟಶೆಟ್ಟಿ, ಶ್ರೀಶೈಲ ಹುಂಡೇಕರ, ಚೇತನ ಗಂಧ, ಅಕ್ಷಯ ಕುಗಟೋಳಿ, ರಾಹುಲ ಕೋಟಗಿ, ರಾಯಪ್ಪ ಡೂಗ,ಶಂಕರ ಪಟ್ಟಣಶೆಟ್ಟಿ, ಪ್ರಭು ಸಾಂಬಾರೆ, ಮಹಾಂತೇಶ ಬೆಟಗೇರಿ ಸೇರಿದಂತೆ ಹಲವರು ಲಖನ ಜಾರಕಿಹೊಳಿ ಅವರನ್ನ ಭೇಟಿ ಆಗಿ ಬೃಹತ್ ಮಾಲೆ ಹಾಕಿ ಭೇಟಿ ಆಗಿ ಬಂದಿದ್ದಾರೆ.