ಬೆಳಗಾವಿ ಯುವಕನಿಗೆ ಧಾರವಾಡ ಯುವತಿಯ ಹೃದಯ : ಧಾರವಾಡ To ಬೆಳಗಾವಿ ಹಾರ್ಟ್ ಜರ್ನಿ….!
ಬೆಳಗಾವಿ : ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಒಡೆಯುತ್ತಿರುವ ಯುವತಿ ಹೃದಯವನ್ನು ಬೆಳಗಾವಿ ಹುಡುಗನಿಗೆ ಜೋಡಿಸಲಾಗುತ್ತಿದ್ದು ಇಂದು ಸಾಯಂಕಾಲ ಧಾರವಾಡದಿಂದ ಬೆಳಗಾವಿಗೆ ಹೃದಯ ರವಾನೆಯಾಗಲಿದೆ.
ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಿಂದ ಬೆಳಗಾವಿ ಕೆಎಲ್ಇ ಆಸ್ಪತ್ರೆ ವರೆಗೆ ಹೃದಯ ರವಾನೆಯಾಗಲಿದೆ. ಇದಕ್ಕೆ ಪೂರಕವೆಂಬಂತೆ ಪೊಲೀಸ್ ಇಲಾಖೆ ಸಕಲ ವ್ಯವಸ್ಥೆ ಮಾಡಿಕೊಂಡಿದೆ.
ಧಾರವಾಡ ಎಸ್ಡಿಎಂ ಆಸ್ಪತ್ರೆಇಂದ ಬೆಳಗಾವಿ ಕೆಎಲ್ಇ ಆಸ್ಪತ್ರೆ ವರೆಗೆ ಗ್ರೀನ್ ಕಾರಿಡಾರ್ ನಲ್ಲಿ ಹೃದಯ ರವಾನೆಯಾಗಲಿದೆ. ಹೃದಯ ರವಾನಿಸುವ ಸಂದರ್ಭದಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಂಡಿದ್ದಾರೆ.