VIDEO-ಮೂರು ವರ್ಷದ ಹಳೆಯ ವಿನಯ್ ಗುರೂಜಿ ವೀಡಿಯೋ ಈಗ ವೈರಲ್ ಆಗಿದ್ದೇಕೆ..? ( Vinay Guruji )
ಬೆಂಗಳೂರು : ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಹಿಂದೆ ನಡೆದ ಯಾವೆಲ್ಲ ಘಟನೆಗಳು ಮತ್ತೊಮ್ಮೆ ಚರ್ಚೆಗೆ ಎಡೆಮಾಡಿಕೊಡಬಹುದು. ಇಂತಹುದೇ ಸಧ್ಯ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಅವರ ಹಳೆ ವೀಡಿಯೋ ವೈರಲ್ ಆಗಿದೆ.
ಹೌದು ಸರಳ ವಾಸ್ತು ಖ್ಯಾತಿಯ ಡಾ. ಚಂದ್ರಶೇಖರ ಗುರೂಜಿ ಅವರ ಭೀಕರ ಹತ್ಯೆ ನಂತರದಲ್ಲಿ ಬೆಂಗಳೂರಿನ ಜ್ಯೋತಿಷಿ ಒಬ್ಬರ ಮನೆಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಇವೆರಡೂ ಘಟನೆಗಳು ಸಧ್ಯ ಚರ್ಚೆಯಲ್ಲಿರುವ ಸಂದರ್ಭದಲ್ಲಿ ವಿನಯ್ ಗುರೂಜಿ ಅವರ ಹಳೇಯ ವೀಡಿಯೋ ಸಧ್ಯ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ವಿನಯ್ ಗುರೂಜಿ ಹಾಗೂ ಅವರ ಗೆಳೆಯರು ಸ್ವಿಮಿಂಗ್ ಫೂಲ್ ಒಂದರಲ್ಲಿ ಸ್ನಾನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿನಯ್ ಗುರೂಜಿ ಅವರು ಭಕ್ತರ ತಲೆ ಮೇಲೆ ಕಾಲು ಇಡುವ ವೀಡಿಯೋ ವೈರಲ್ ಆಗಿದೆ. ಜೊತೆಗೆ ಆ ಸಂದರ್ಭದಲ್ಲಿ ಕೆಲವೊಂದು ಮಾತುಗಳು ಇಲ್ಲಿ ಕೇಳಿಬರುತ್ತವೆ. ( Vinay guruji )
ಸಧ್ಯ ಹಳೆ ವೀಡಿಯೋ ತಗೆದುಕೊಂಡು ಅದಕ್ಕೆ ಉಪ್ಪು ಮಸಾಲೆ ಹಚ್ಚಿ ಈಗ ವೈರಲ್ ಮಾಡುತ್ತಿದ್ದಾರೆ ಕೆಲವರು. ಆದರೆ ಇದರ ಹಿಂದೆ ಇರುವ ಕಾರಣ ಮಾತ್ರ ವಿನಯ್ ಗುರೂಜಿ ಅವರನ್ನು ಹೀಯಾಳಿಸಿ ಅವರ ಘನತೆಗೆ ದಕ್ಕೆ ತರುವುದಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡವರ ಕುರಿತು ಸುಳ್ಳು ಸುದ್ದಿ ಹಬ್ಬಿಸುವುದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.