ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ (Gruhalakshmi scheme) ಯೋಜನೆಗೆ ಸಂಬಂಧಿಸಿದಂತೆ, ಅನರ್ಹರಿಗೆ ಬ್ರೇಕ್ ಹಾಕಲು, ಇನ್ನು ಮುಂದೆ ಪ್ರತಿ ತಿಂಗಳು ₹2,000 ರೂಪಾಯಿ ನಗದು ನಗದು ಪಡೆಯಲು ಹೊಸ ನಿಯಮವನ್ನು ಕಡ್ಡಾಯಗೊಳಿಸಿದೆ. ಇದು ನಡೆದ ಸಚಿವ ಸಂಪುಟ (Cabinet) ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲು ಸರ್ಕಾರ ಈ “ಆಧಾರ್-ಗೃಹಲಕ್ಷ್ಮಿ” ಕಾರ್ಯಾಚರಣೆಗೆ ಇಳಿದಿದೆ. ಇದರಿಂದ ನಿಜವಾದ ಫಲಾನುಭವಿಗಳನ್ನು ಗುರುತಿಸಲು ಬಯೋಮೆಟ್ರಿಕ್ (Biometric) ಅಥವಾ ಫೇಶಿಯಲ್ ಅಥೆಂಟಿಕೇಶನ್ (ಮುಖದ ಗುರುತು ದೃಢೀಕರಣ) ಮಾಡುವುದನ್ನು ಕಡ್ಡಾಯಗೊಳಿಸಲು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಬರುವ 2,000 ರೂ. ಹಣದ ಕುರಿತು ಫಲಾನುಭವಿಗಳಿಗೆ ಒಂದು ತಿಂಗಳ ಬಳಿಕವಾಗಿ ತಮ್ಮ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ನಿಗದಿತ ಅವಧಿಯೊಳಗೆ ಈ ಕೆಲಸ ಮಾಡದಿದ್ದರೆ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದನ್ನು ತಡೆಹಿಡಿಯಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಒಟ್ಟು 1.20 ಕೋಟಿ ಕೋಟಿಗೂ ಅಧಿಕ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಆದರೆ, ಮೃತಪಡಿದವರ ಹಾಗೂ ಅನರ್ಹರ ಖಾತೆಗಳಿಗೆ ಹಣ ಜಮಾವಣೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ನಡೆಸಿದ ಪ್ರಾಥಮಿಕ ಪರಿಶೀಲನೆಯಲ್ಲಿ ಈಗಾಗಲೇ ಸುಮಾರು 4.30 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಸರ್ಕಾರದ ಈ ಸದರಿ ಯೋಜನೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ವರದಿಯಾಗಿದೆ.
ಯೋಜನೆಯ ಮರುಪರಿಶೀಲನೆ ಮತ್ತು ಪರಿಶೋಧನೆ (Revision) ಹೆಸರಿನಲ್ಲಿ ಸರ್ಕಾರ ತಂದಿರುವ ಈ ಹೊಸ ನಿಯಮದಿಂದಾಗಿ ಮಹಿಳೆಯರು ತಕ್ಷಣವೇ ತಮ್ಮ ಇ-ಕೆವೈಸಿ ಅಥವಾ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.
ಗೃಹಲಕ್ಷ್ಮಿಯರೇ ಗಮನಿಸಿ ; ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಜಮೆ ಆಗಲ್ಲ 2000 ರೂಪಾಯಿ



