ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಈ ಮಧ್ಯೆ ಪತ್ನಿ ಜೊತೆ ದೇವೇಗೌಡರು ಕೊನೆ ಕ್ಷಣದಲ್ಲಿ ಕಳೆದ ಅಪರೂಪದ ವೀಡಿಯೋ ಪತಿ, ಪತ್ನಿಯ ಬಾಂಧವ್ಯ ಸೂಚಿಸುತ್ತದೆ.
ದೇವೇಗೌಡರ ರಾಜಕೀಯ ಬದುಕಿಗೆ ಬೆನ್ನೆಲಿಬಾಗಿ ನಿಂತಿದ್ದು ಇದೇ ಚೆನ್ನಮ್ಮನವರು. ಗೌಡರ ರಾಜಕೀಯ ಬದುಕಿಗೆ ಆಸರೆಯಾಗಿದ್ದೇ ದೊಡ್ಡ ಕುಟುಂಬದ ಜವಾಬ್ದಾರಿ ಹೊತ್ತ ಕರುಣಾಮಯಿ ಚೆನ್ನಮ್ಮ.
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯಲ್ಲೇ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನಮ್ಮನವರನ್ನು ಕುಟುಂಬ ನೋಡಿಕೊಳ್ಳುತ್ತಿತ್ತು. ಈ ಮಧ್ಯೆ ಪತ್ನಿಗೆ ಕೈತುತ್ತು ತಿನ್ನಿಸಿದ್ದ ದೇವೇಗೌಡರ ಅಪರೂಪದ ವೀಡಿಯೋ ಸಧ್ಯ ಎಂತವರ ಕಣ್ಣಲ್ಲೂ ನೀರು ತರಿಸುವುದಂತು ಸುಳ್ಳಲ್ಲ.



