ಬೆಂಗಳೂರು : ರಾಜ್ಯಾದ್ಯಂತ ತಲೆದೋರಿರುವ ತೀವ್ರ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕುರಿತು ಇಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಜಿಲ್ಲಾಧಿಕಾರಿಗಳ ಸಭೆ ನಡೆಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ತವ್ಯಲೋಪ ಹಾಗೂ ಬೇಜಾವಾಬ್ದಾರಿತನ ಪ್ರದರ್ಶಿಸಿದ ಅಧಿಕಾರಿಯೊಬ್ಬರಿಗೆ ಸಿಎಂ ಡಿ.ಕೆ. ಶಿವಕುಮಾರ್ ಸಭೆಯಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಸಭೆಯಲ್ಲಿ ಕಂದಾಯ ಸಚಿವ ಜಿ. ಪರಮೇಶ್ವರ್ ಅವರು ಬರ ಪರಿಸ್ಥಿತಿಯ ಕುರಿತು ಗಂಭೀರವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಉಡುಪಿ ಜಿಲ್ಲಾಧಿಕಾರಿ ಸುದೀಪ್ ಅವರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಿ ವಿರುದ್ಧ ತೀವ್ರ ಕೆಂಡಾಮಂಡಲರಾದರು.

ನಿಮಗೆ ಸಭೆಯ ಮೇಲೆ ಆಸಕ್ತಿ ಇಲ್ಲದಿದ್ದರೆ ದಯವಿಟ್ಟು ಹೊರಗಡೆ ಹೋಗಿ. ಅಪ್ಪೊಂದು ಅರ್ಜೆಂಟ್ ಫೋನ್ ಕರೆ ಇದ್ದರೆ ಹೊರಗೆ ಹೋಗಿ ಮಾತನಾಡಿ. ಆಮೇಲೆ ಬಂದು ಸಭೆಯಲ್ಲಿ ಕುಳಿತುಕೊಳ್ಳಿ ಒಬ್ಬ ಜವಾಬ್ದಾರಿಯುತ ಜಿಲ್ಲಾಧಿಕಾರಿಯಾಗಿ ನಿಮಗೆ ಸಭೆಯ ಮರ್ಯಾದೆ ಕಾಪಾಡುವುದು ಗೊತ್ತಿಲ್ಲ ಎಂದರೆ, ನಿಮ್ಮ ಕೆಳಗಿನ ಅಧಿಕಾರಿಗಳು ಇನ್ನುಷ್ಟು ರೀತಿ ನಿರ್ಲಕ್ಷ್ಯ ವಹಿಸುವುದು? ಇಂದೇ ಇಂತಹ ನಡವಳಿಕೆಯನ್ನು ಸಹಿಸುವುದಿಲ್ಲ ಎಂದು ಸಭೆಯಲ್ಲೇ ಖಡಕ್ ಎಚ್ಚರಿಕೆ ನೀಡಿದರು.

ಬರ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ ಡಿ.ಕೆ. ಶಿವಕುಮಾರ್, ಬೋರ್‌ವೆಲ್ ದಂಧೆಗೆ ಬ್ರೇಕ್ ಹಾಕಲು ಹೊಸ ನಿಯಮ ಪ್ರಕಟಿಸಿದರು. ರಾಜ್ಯದಲ್ಲಿ ಇಂದಿನಿಂದ ಹೊಸದಾಗಿ ಬೋರ್‌ವೆಲ್ ಕೊರೆಯುವಾಗಿ ಕಡ್ಡಾಯವಾಗಿ ಅದರ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಮಾಡಬೇಕು.

ಎಲ್ಲ ಬೋರ್‌ವೆಲ್ ಕೊರೆಯಲಾಗಿದೆ ಎಂದು ಕಾಗದದ ಮೇಲೆ ಸುಳ್ಳು ಲೆಕ್ಕ ಹಾಕುವುದಿಲ್ಲ. ಎಲ್ಲಾದರೂ ನಕಲಿ ಅಥವಾ ಬೋಗಸ್ ಬೋರ್‌ವೆಲ್ ನಡೆದರೆ ಆಯಾ ಜಿಲ್ಲೆ ಪಂಚಾಯತ್ ಸಿಇಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಕೇವಲ ಕಚೇರಿಯಲ್ಲಿ ಕುಳಿತು ಪೇಪರ್ ರಿಪೋರ್ಟ್ ನೀಡಿದರೆ ಸಾಲದು, ನನಗೆ ಅಧಿಕಾರಿಗಳು ಫೀಲ್ಡ್‌ಗೆ ಇಳಿದು ಕೆಲಸ ಮಾಡಿದೆ ವರದಿ ಬೇಕು. ರಾಜ್ಯದ 178 ತಾಲೂಕುಗಳಲ್ಲಿ ಶೇಕಡಾ 60 ರಷ್ಟು ಭೀಕರ ಮಳೆ ಕೊರತೆ ಕಾಣಿಸಿಕೊಂಡಿದೆ. 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಸಲ್ಲಿಸಬೇಕಾಗಿರುವುದರಿಂದ ಡಿಸಿ-ಸಿಇಓಗಳು ತ್ವರಿತವಾಗಿ ಸಮಗ್ರ ಮಾಹಿತಿ ನೀಡಬೇಕು.

ಗಾಮೀಣ ಭಾಗದ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತಲಾ 1 ಕೋಟಿ ರೂಪಾಯಿ ಹೆಚ್ಚುವರಿ ಹಣ ಘೋಷಿಸಲಾಗಿದೆ. ಡಿಸಿಗಳು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೃಷಿ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.