ಬೆಳಗಾವಿ : ಶಿಕ್ಷಣ ಇಲಾಖೆಯಿಂದ‌ ಕೊಡಮಾಡುವ ರಾಜ್ಯ ಮಟ್ಟದ ಉತ್ತಮ‌ ಶಿಕ್ಷಕ ಪ್ರಶಸ್ತಿಗೆ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಇಬ್ಬರು ಪ್ರಾಥಮಿಕ ‌ಶಿಕ್ಷಕರು ಆಯ್ಕೆಯಾಗಿದ್ದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಪ್ರಾಥಮಿಕ‌ ಶಾಲಾ ವಿಭಾಗದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಮೂಡಲಗಿಯ ಹುಲ್ಲೂರು ಕ್ರಾಸ್ ನ ಪ್ರಾಥಮಿಕ ಶಾಲಾ‌ ಶಿಕ್ಷಕ ಬಸಪ್ಪ ಪರಪ್ಪ ಪಾಟೀಲ್ ಆಯ್ಕೆಯಾಗಿದ್ದಾರೆ‌.

ಬೆಳಗಾವಿ ಶೈಕ್ಷಣಿಕ ವಿಭಾಗದಿಂದ ಪ್ರಾಥಮಿಕ‌ ಶಾಲಾ ವಿಭಾಗದಲ್ಲಿ ಕಡೋಲಿ ಗ್ರಾಮದ ಜಾಫರವಾಡಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರಭಾವತಿ ಬಾಳಪ್ಪ ಹಾಲೆನ್ನವರ ಆಯ್ಜೆಯಾಗಿದ್ದಾರೆ.

ಉತ್ತಮ ಶಾಲಾ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕರಿಕಟ್ಟಿ ಸರಕಾರಿ ಪ್ರೌಢಶಾಲೆ ಸ್ಥಾನ ಪಡೆದಿದ್ದು ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ.