
ಹುಕ್ಕೇರಿ : ಮಕ್ಕಳಿಗೆ ವಿಷ ಕೊಟ್ಟ ತಂದೆ : ಒಂದೇ ಕುಟುಂಬದ ಐವರು ಸಾವು

ಹುಕ್ಕೇರಿ : ಹೆಂಡತಿ ಸಾವನಪ್ಪಿದ್ದ ಘಟನೆಯಿಂದ ಮನನೊಂದು ನಿವೃತ್ತ ಯೋಧ, ತನ್ನ ನಾಲ್ವರು ಮಕ್ಕಳಿಗೆ ವಿಷಕೊಟ್ಟು ತಾನು ಸೇವಿಸಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.
ಬೋರಗಲ್ ಗ್ರಾಮದ 46 ವಯಸ್ಸಿನ ನಿವೃತ್ತ ಸೈನಿಕ ಗೋಪಾಲ ದೊಡ್ಡಪ್ಪ ಹಾದಿಮನಿ ಮತ್ತು ಆತನ ಮೂರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗ ಸೇರಿದಂತೆ ಐದು ಜನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳಾದ ಸೌಮ್ಯ ಗೋಪಾಲ್ ಮಾದೇವಿ(19), ಸ್ವಾತಿ ಗೋಪಾಲ ಹಾದಿಮನಿ(16), ಸಾಕ್ಷಿ ಗೋಪಾಲ್ ಹಾದಿಮನಿ(12), ಸೃಜನ್ ಗೋಪಾಲ್ ಹಾದಿಮನಿ(10) ಮೃತ ದುರ್ದೈವಿಗಳು.
ಕಳೆದ ಐದು ತಿಂಗಳ ಹಿಂದೆ ಹಿಂದೆ ಕೊರೊನಾ ನಂತರ ಬ್ಲ್ಯಾಕ್ ಪಂಗಸ್ ನಿಂದ ಯೋಧ ಗೋಪಾಲ್ ಹೆಂಡತಿ ಸಾವನಪ್ಒಇದ್ದರು ಇದರಿಂದ ಮನನೊಂದು ಇವರು ತಮ್ಮ ನಾಲ್ವರು ಮಕ್ಕಳಿಗೆ ವಿಷ ಕೊಟ್ಟು ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಸಂಕೇಶ್ವರ ಪಿಎಸ್‍ಆಯ್ ಗಣಪತಿ ಕೊಗನೊಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.