Select Page

Advertisement

ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಘೋಷಣೆ – ಉಳಿದ ಚುನಾವಣೆ ಮಾಹಿತಿ…!

ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಘೋಷಣೆ – ಉಳಿದ ಚುನಾವಣೆ ಮಾಹಿತಿ…!

ಬೆಂಗಳೂರು : ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಶಾಸಕಸ್ಥಾನ ತೊರೆದು ಸಂಸದರಾಗಿದ್ದ ಮೂರು ಕ್ಷೇತ್ರಗಳಿಗೆ ಸಧ್ಯ ಚುನಾವಣಾ ದಿನಾಂಕ ಪ್ರಕಟವಾಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಉಪ ಸಮರದ ಕಾವು ಜೋರಾಗತೊಡಗಿದೆ.

ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಈ ಮೂರು ಕ್ಷೇತ್ರಗಳಲ್ಲಿ ನವೆಂಬರ್ 13 ರಂದು ಮತದಾನ ನಡೆಯಲಿದ್ದು ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿದ್ದ ಕುಮಾರಸ್ವಾಮಿ ರಾಜೀನಾಮೆ ನೀಡಿ ಮಡ್ಯದಿಂದ ಲೋಕಸಭಾ ಸದಸ್ಯರಾದರು. ಇನ್ನೂ ಶಿಗ್ಗಾಂವಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಬೊಮ್ಮಾಯಿ ಗದಗ – ಹಾವೇರಿಯಿಂದ ಸಂಸದರಾದರು, ಇನ್ನೂ ಸಂಡೂರು ಶಾಸಕರಾಗಿದ್ದ ಇ. ತುಕಾರಾಂ ಬಳ್ಳಾರಿ ಸಂಸದರಾಗಿದ್ದು, ಇವರಿಂತ ತರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.

ಇನ್ನೂ ಕೇರಳ, ಜಾರ್ಖಂಡ್ ಹಾಗೂ ಮಹಾರಾಷ್ಟ್ರದ ವಿಧಾನಸಭಾ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಕೇರಳದ 47 ವಿಧಾನಸಭಾ ಸ್ಥಾನಗಳು ಹಾಗೂ ಒಂದು‌ ಲೋಕಸಭಾ ಸ್ಥಾನಕ್ಕೆ ನವೆಂಬರ್ 13 ರಂದು ಮತನಾದ ನಡೆಯಲಿದೆ. ಅಷ್ಟೇ ಅಲ್ಲದೆ ಉತ್ತರಾಖಂಡದ ಒಂದು ವಿಧಾನಸಭಾ ಕ್ಷೇತ್ರ ಹಾಗೂ ಮಹಾರಾಷ್ಟ್ರದ ಒಂದು ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 20 ರಂದು ಮತದಾನ ನಡೆಯಲಿದ್ದು ಎಲ್ಲಾ ಕ್ಷೇತ್ರದ ಫಲಿತಾಂಶ ನವೆಂಬರ್ 23 ಕ್ಕೆ ಪ್ರಕಟವಾಗಲಿದೆ.

ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್ 20 ರಂದು ಮತದಾನ ನಡೆಯಲಿದೆ. ಇನ್ನೂ ಜಾರ್ಖಂಡ್ ನಲ್ಲಿ ನವೆಂಬರ್ 13 ಹಾಗೂ ನವೆಂಬರ್ 20 ರಂದು ಎರಡು ಹಂತಗಳ ಚುನಾವಣೆ ನಡೆಯಲಿದ್ದು ನವೆಂಬರ್ 23 ರಂದು ಫಲಿತಾಂಶ ಹೊರಬೀಳಲಿದೆ‌.

Advertisement

Leave a reply

Your email address will not be published. Required fields are marked *

error: Content is protected !!