
ಡಿಕೆಶಿ ಭೇಟಿಯಾದ ದರ್ಶನ್ ಪತ್ನಿ ; ಇದರ ಹಿಂದೆ ಅಡಗಿರುವ ಅಸಲಿ ಸತ್ಯ ಏನು….?

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ನಟ ದರ್ಶನ್ ಭೇಟಿ ರಾಜ್ಯದಲ್ಲಿ ಸಧ್ಯ ಸಂಚಲನ ಮೂಡಿಸಿದೆ. ದಾಸ ಜೈಲು ವಾಸ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಅವರ ಪತ್ನಿ ಸರ್ಕಾರದ ಪ್ರಮುಖ ಭಾಗವಾದ ಡಿಕೆಶಿ ಭೇಟಿ ಹಿಂದಿನ ಅಸಲಿಯತ್ತು ಏನು ಎಂಬುದರ ಚರ್ಚೆ ಜೋರಾಗಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ಕೊಲೆ ಮಾಡಿರುವ ಆರೋಪದ ಮೇಲೆ ಕನ್ನಡ ಖ್ಯಾತ ನಟ ದರ್ಶನ್ ಜೈಲು ಸೇರಿ ತಿಂಗಳುಗಳೇ ಕಳೆದಿವೆ. ಈ ಸಂದರ್ಭದಲ್ಲಿ ತನಿಖಾ ಅಧಿಕಾರಿಗಳು ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ದರ್ಶನ್ ವಿರುದ್ಧ ದೋಷಾರೋಪ ಪಟ್ಟಿ ತಯಾರಿ ಮಾಡುತ್ತಿದ್ದಾರೆ.
ದೋಷಾರೋಪಣೆ ಪಟ್ಟಿ ಕೋರ್ಟ್ ಗೆ ಸಲ್ಲಿಕೆಯಾಗುವವರೆಗೆ ದರ್ಶನ್ ಜಾಮೀನಿಗೆ ಅರ್ಜಿ ಹಾಕದಂತೆ ಅವರ ಪರ ವಕೀಲರು ನಿರ್ಧರಿಸಿದಂತಿದೆ. ಇದೇ ಸಂದರ್ಭದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಸಿಎಂ ಡಿಕೆಶಿ ಅವರನ್ನು ಭೇಟಿಯಾಗಿ ವಿಶೇಷ ಮಾತುಕತೆ ನಡೆಸಿದ್ದಾರೆ.
ತಮ್ಮ ಮಗನ ಶಾಲೆ ಕುರಿತು ಮಾತನಾಡಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದರು ಎಂಬ ಅಭಿಪ್ರಾಯವನ್ನು ಡಿಕೆಶಿ ಹೇಳಿದ್ದರು, ಇದರ ಹಿಂದೆ ಅಸಲಿ ಸತ್ಯ ಅಡಗಿದೆ ಎಂಬ ಗುಸು, ಗುಸು ಇದೆ. ಸಾಮಾನ್ಯವಾಗಿ ಮಗನ ಶಿಕ್ಷಣ ವಿಷಯದ ಕುರಿತು ಚರ್ಚೆಯ ಮಧ್ಯೆ ಬೇರೆ ವಿಷಯಗಳು ಇವೆ ಎಂದು ಹೇಳಲಾಗುತ್ತಿದೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಕೆಶಿ ಭೇಟಿ ಮಾಡಿದ ಸಂದರ್ಭದಲ್ಲಿ ನ್ಯಾಯಾಯಕ್ಕೆ ತನಿಖಾ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬ ಮಾಡಿರುವ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ದರ್ಶನ್ ಅವರಿಗೆ ಜಾಮೀನು ಪಡೆಯಲು ಕಾಯುತ್ತಿರುವ ವಿಷಯವನ್ನು ಡಿಸಿಎಂ ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದಾರೆ ಎಂಬುದು ಕೇಳಿಬರುತ್ತಿರುವ ಮಾತು.
ಈಗಾಗಲೇ ನಟ ದರ್ಶನ್ ಅವರ ವಿರುದ್ಧ ಕೇಳಿಬಂದ ಕೊಲೆ ಪ್ರಕರಣ ನ್ಯಾಯಾಲಯ ಹಂತದಲ್ಲಿ ಇದ್ದು ಈ ಸಂದರ್ಭದಲ್ಲಿ ಡಿಕೆಶಿ ಬೇರೆ ಯಾವ ಸಹಾಯ ಮಾಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಆದರೆ ಪತಿಯ ಸಂಕಷ್ಟದ ಸಂದರ್ಭದಲ್ಲಿ ವಿಜಯಲಕ್ಷ್ಮಿ ಬೆನ್ನಿಗೆ ನಿಂತಿರುವುದು ಮಾತ್ರ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.