
ಮಾಲೀಕನ ಅಂತ್ಯಸಂಸ್ಕಾರಕ್ಕೆ ಬಂದ ಕರು : ಬಟ್ಟೆ ಸರಿಸಿ ಹಣೆಗೆ ಮುತ್ತಿಟ್ಟ ಗೋವು

ಜಾರ್ಖಂಡ್‌ನ : ಪ್ರಾಮಾಣಿಕತೆಗೆ ಪ್ರಾಣಿಗಳೇ ಒಂದು ಕೈ ಮೇಲು. ನಂಬಿದ ಮಾಲೀಕನನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ. ತನ್ನನ್ನು ಸಾಕಿದ ಒಡೆಯ ತೀರಿ ಹೋದಮೇಲೆ ಅವನ ಅಂತ್ಯಸಂಸ್ಕಾರಕ್ಕೆ ಕರು ಒಂದು ಓಡೋಡಿ ಬಂದ ಘಟನೆ ನಡೆದಿದೆ.
ಹಜಾರಿಬಾಗ್‌ನಲ್ಲಿ ನಡೆದ ಮನುಷ್ಯ ಮತ್ತು ಪ್ರಾಣಿಯ ಪ್ರೀತಿಯ ವಿಶಿಷ್ಟ ಘಟನೆಯು ಭಾರೀ ಸದ್ದು ಮಾಡುತ್ತಿದೆ. ಹಜಾರಿಬಾಗ್‌ನ ಚೌತಿ ಗ್ರಾಮದಲ್ಲಿ, ಕರುವೊಂದು ತನ್ನ ಮಾಲೀಕನ ಸಾವಿನ ಬಳಿಕ ಆತನ ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ತಲುಪಿದೆ. ಅಷ್ಟೇ ಅಲ್ಲ ಚಿತೆ ಮೇಲೆ ಇಟ್ಟಿದ್ದ ಮೃತದೇಹಕ್ಕೆ ಬೇರೆಯವರೊಂದಿಗೆ ಪ್ರದಕ್ಷಿಣೆ ಹಾಕಿ ಬಾಯಿಯಲ್ಲಿ ಕಟ್ಟಿಗೆಯನ್ನು ತಂದು ಚಿತೆಯ ಮೇಲೆ ಇಟ್ಟಿದೆ.
ನಮ್ಮ ವಾಟ್ಸಪ್ ಗ್ರುಪ್ ಸೇರಲು ಕೆಳಗಿನ ಲಿಂಕ್ ಒತ್ತಿ https://chat.whatsapp.com/F9a6OMy0qLqK2Ph3VwuGUL
ಅಷ್ಟೇ ಅಲ್ಲ ಚಿತೆಯ ಮೇಲೆ ಇಟ್ಟಿದ್ದ ಮೃತದೇಹಕ್ಕೆ ಬೇರೆಯವರೊಂದಿಗೆ ಪ್ರದಕ್ಷಿಣೆ ಹಾಕಿ ಬಾಯಿಯಿಂದ ತಾನೂ ಕಟ್ಟಿಗೆಯನ್ನು ತಂದು ಚಿತೆಯ ಮೇಲೆ ಇಟ್ಟಿದೆ. ಪಾರ್ಥಿವ ಶರೀರ ಪಂಚಭೂತಗಳಲ್ಲಿ ವಿಲೀನವಾಗುವವರೆಗೂ ಅಲ್ಲಿಂದ ಕದಲಲಿಲ್ಲ ಎಂದು ಹೇಳಲಾಗುತ್ತಿದೆ.

ಏಕಾಏಕಿ ಸ್ಮಶಾನದಲ್ಲಿ ಮೃತದೇಹದ ಬಳಿ ಕರು ಬರುತ್ತಿರುವುದನ್ನು ಕಂಡ ಜನರು ಅದನ್ನು ಓಡಿಸಲು ಯತ್ನಿಸಿದರಾದರೂ ಅದು ಮೃತದೇಹದ ಬಳಿ ಮತ್ತೆ ಮತ್ತೆ ಬರಲಾರಂಭಿಸಿತು. ಇದಾದ ಬಳಿಕ ಅಲ್ಲಿದ್ದ ಹಿರಿಯರ ಒತ್ತಾಯದ ಮೇರೆಗೆ ಮೃತದೇಹದ ಬಳಿ ಹೋಗಲು ಅವಕಾಶ ನೀಡಿದಾಗ ಮೃತದೇಹಕ್ಕೆ ಮುತ್ತಿಟ್ಟು ಅದು ಅಳಲಾರಂಭಿಸಿದೆ. ಇದಾಧ ಬಳಿಕ ಜನರು ಕರುವಿಗೆ ಸ್ನಾನ ಮಾಡಿಸಿ ಅಂತ್ಯಕ್ರಿಯೆಯ ವಿಧಿ ವಿಧಾನಗಳಲ್ಲಿ ತೊಡಗಿಸಿಕೊಂಡರು.
ಮೂರು ತಿಂಗಳ ಹಿಂದೆ ಮೇವಲಾಲ್ ಕರುವನ್ನು ಮಾರಾಟ ಮಾಡಿದ್ದರು ಎಂಬುವುದು ಉಲ್ಲೇಖನೀಯ. ಹೌದು ಈ ಇಡೀ ವಿಷಯ ನಡೆದಿದ್ದು, ಮೇವಾವಾಲ್ ಢಾಕೂರ್ ಮೃತಪಟ್ಟ ಪಪ್ರೋ ಗ್ರಾಮದ್ದಾಗಿದೆ. ಮೇವಾವಾಲ್ ಬಳಿ ಹಸುವೊಂದಿತ್ತು. ಇದು ಕರುವೊಂದನ್ನು ಹಾಕಿತ್ತು. ಆದರೆ ಮೇವವಾಲ್ ಇದನ್ನು ಮೂರು ತಿಂಗಳ ಹಿಂದೆ ಬೇರೆ ಗ್ರಾಮದ ರೈತನಿಗೆ ಮಾರಾಟ ಮಾಡಿದ್ದರು.
ಹೀಗಿದ್ದರೂ ಮೇವಲಾಲ್ ಠಾಕೂರ್ ಮೃತಪಟ್ಟಾಗ ಈ ಕರು ಗ್ರಾಮವನ್ನು ತಲುಪಿ ಅಳಲು ಪ್ರಾರಂಭಿಸಿತು. ಅಷ್ಟೇ ಅಲ್ಲ, ಮೃತದೇಹದ ಹಣೆ ಮತ್ತು ಪಾದಗಳಿಗೆ ಮುತ್ತಿಟ್ಟಿದೆ. ಇನ್ನು ಮೇವವಾಲ್ ಮೃತದೇಹ ಪಂಚಭೂತಗಳಲ್ಲಿ ಲೀನವಾಗುವವರತೆಗೂ ಈ ಕರು ಅಲ್ಲಿಂದ ಕದಲಿಲ್ಲ. ಬಟ್ಟೆಯಿಂದ ಮುಚ್ಚಿದ ಮೃತದೇಹದಿಂದ ಬಟ್ಟೆ ತೆಗೆದು, ತಲೆಗೆ ಮುತ್ತಿಕ್ಕಿ, ನಂತರ ಪಾದಗಳ ಬಳಿ ತೆರಳಿ ಅಳುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.