ಹನಿಟ್ರ್ಯಾಪ್ ಬಲೆಯಲ್ಲಿ ಕಾಂಗ್ರೆಸ್ ಪ್ರಭಾವಿ ಸಚಿವ ; ಸಿದ್ದರಾಮಯ್ಯ ಆಪ್ತನ ಬಲೆಗೆ ಸ್ಕೆಚ್….?
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಓರ್ವ ಸಚಿವರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಲು ಕಸರತ್ತು ನಡೆದಿತ್ತು ಎಂಬ ಸುದ್ದಿ ಜೋರಾಗಿದೆ.
ಆ ಸಚಿವರನ್ನು ಅಶ್ಲೀಲ ಸಿಡಿ ಬಲೆಗೆ ಬೀಳಿಸಿ ಮಾನ ಹರಾಜು ಹಾಕುವ ಕೆಲಸಕ್ಕೆ ಗ್ಯಾಂಗ್ ಮುಂದಾಗಿದ್ದು, ಅದೃಷ್ಟವಶಾತ್ ಇದರಿಂದ ಸಚಿವರು ಪಾರಾಗಿದ್ದಾರೆ.
ಸ್ವಲ್ಪ ಮೈ ಮರೆತ್ತಿದ್ದರು ಆ ಸಚಿವರು ಅಶ್ಲೀಲ ಬಲೆಯಲ್ಲಿ ಸಿಲುಕಬೇಕಿತ್ತು. ಆದರೆ ಅವರ ಆಪ್ತರ ಬಳಗದಿಂದ ಘಟನೆ ತಡೆದಿದ್ದು, ಸಚಿವರು ವಾರ್ನ್ ಮಾಡಿದ್ದಾಗಿ ತಿಳಿದುಬಂದಿದೆ.
ಇನ್ನೂ ಘಟನೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಗೂ ದೂರು ನೀಡಿರುವ ಪ್ರಭಾವಿ ಸಚಿವರು, ತಮ್ಮದೇ ಪಕ್ಷದ ಪ್ರಭಾವಿ ನಾಯಕನ ವಿರುದ್ಧ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕಾಂಗ್ರೆಸ್ ಹೈಕಮಾಂಡ್ ಸಮಯ ಸಂದರ್ಭ ನೋಡಿ ಆ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ ಎಂಬ ಮಾತು ಎಲ್ಲೆಡೆ ಜೋರಾಗಿವೆ.


