Video – ಮನವಿ ಕೊಡ್ಲಿಕ್ಕೆ ಬಂದವನಿಗೆ ಸಿಎಂ ಹೇಗೆ ಉಗಿದರು ನೋಡಿ…!
ಬೆಳಗಾವಿ : ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆಂದು ಭಾನುವಾರ ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮನವಿ ನೀಡಲು ಬಂದವನಿಗೆ ಸಿಎಂ ಏ ಥೂ ಎಂದು ಉಗಿದ ಘಟನೆ ನಡೆಯಿತು.
ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಆಶಿರ್ವಾದ ಪಡೆದ ಸಿಎಂ ಸಿದ್ದರಾಮಯ್ಯ ಅವರು ಹೊರಬರುವ ಸಂದರ್ಭದಲ್ಲಿ ವ್ಯಕ್ತಿಯೋರ್ವ ಮನವಿ ಸಲ್ಲಿಸಲು ಮುಂದಾದ. ಈ ಸಂದರ್ಭದಲ್ಲಿ ಮೂರು ಜಿಲ್ಲಾಧಿಕಾರಿ ಬದಲಾದರು ನನ್ನ ಕೆಲಸ ಆಗಿಲ್ಲ ಎಂದರು.
ಇದಕ್ಕೆ ಗರಂ ಆದ ಸಿಎಂ ನಾನು ಎಲ್ಲಿದ್ದೇನೆ, ಥೂ ನೀನಾ ಇಲ್ಲಿ ಬಂದೂ ಇದನ್ನೇ ಮಾಡ್ತೇವಿ, ಎಲ್ಲಿದ್ದೇವೆ ಗೊತ್ತಾಗಲ್ವಾ ಎಂದು ಗದರಿ ಮುಂದೆ ಸಾಗಿದರು. ನಂತರ ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದರು.


