Select Page

ಲೀವರ್ ಕಸಿ ಮಾಡಿಸಲು ಬೇಕಿದೆ ನೆರವಿನ ಹಸ್ತ – ತುತ್ತು ಅನ್ನಕ್ಕಾಗಿ ಪರದಾಟ

ಲೀವರ್ ಕಸಿ ಮಾಡಿಸಲು ಬೇಕಿದೆ ನೆರವಿನ ಹಸ್ತ – ತುತ್ತು ಅನ್ನಕ್ಕಾಗಿ ಪರದಾಟ

ಚಿಕ್ಕೋಡಿ : ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೊಟ್ಟೆಗಾಗಿ ನಿತ್ಯ ದುಡಿಯಲೇಬೇಕು.ಇರುವ ಪಾನ ಶಾಪ ಬಂದ ಮಾಡಿ ಆಸ್ಪತ್ರೆಗೆ ನಿತ್ಯ ಅಲೆದಾಡುವ ಯುವಕನ ಕರುಣಾಜನಕ ಕಥೆ ಕೇಳಿದರೆ ಹೃದಯವಂತರ ಕರಳು ಕಿತ್ತು ಬರುವದು ಗ್ಯಾರಂಟಿ.
ತಾಲೂಕಿನ ಕರೋಶಿ ಗ್ರಾಮದ ಬಾಜಿರಾವ್ ಸುಳಕೂಡೆ ಎಂಬಾತನೇ ನಿತ್ಯ ಆಸ್ಪತ್ರೆಗೆ ಅಲೆದಾಡುತ್ತಿದ್ದಾನೆ.

ಸಂಸಾರದ ಬಂಡಿ ಸಾಗಿಸುತ್ತಿದ್ದ ವ್ಯಕ್ತಿಗೆ ಲಿವರ ಸಿರೋಸೀಸನ ಕಾಯಿಲೆಯಿಂದ ಬಳಲುತ್ತಿದ್ದಾನೆ. ಇತನ ಲೀವರ್ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಉದರ ಪೋಷಣೆಗಾಗಿ ಪರದಾಡುವ ವ್ಯಕ್ತಿ ಇದೀಗ ತನ್ನ ಆಸ್ಪತ್ರೆ ಚಿಕಿತ್ಸೆಗೆ ಹಣವಿಲ್ಲದೆ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.ಬಾಜುರಾವನಿಗೆ ಒಂದು ಹೆಣ್ಣು,ಒಂದು ಗಂಡು ಮಗುವಿದೆ. ವೃದ್ದ ತಾಯಿಯನ್ನು ಸಾಕಿ ಸಲುಹಯುವ ಮಹತ್ತರವಾದ ಜವಾಬ್ದಾರಿ ಇತನ ಮೇಲೆಯಿದೆ.ಇದೀಗ ಇತನ ವೈದ್ಯಕೀಯ ವೆಚ್ಚಕ್ಕಾಗಿ 22 ಲಕ್ಷ ರೂಗಳ ಬೇಕಾಗಿದೆ.

ಕೈಯಲ್ಲಿ ಬಿಡಿಗಾಸು ಇಲ್ಲದೆ ಬಾಜಿರಾವನ ಬದುಕಿಸಿಕೊಳ್ಳಿವದಕ್ಕಾಗಿ ಪತ್ನಿ ಹಾಗೂ ವೃದ್ದ ತಾಯಿ ದಾನಿಗಳ ಬಳಿ ನೆರವಿನ ಹಸ್ತ ಚಾಚಿದ್ದಾರೆ. ಬರಲಿದೆ, ಕೈಯಲ್ಲಿ ಕಾಸು ಇಲ್ಲ , ಏನು ಮಾಡುವುದು ಎಂಬ ಗಾಡವಾದ ಚಿಂತೆಯಲ್ಲಿ ಪುಟಾಣಿ ಕಂದಮ್ಮಗಳು ಪತ್ನಿ ಕಣ್ಣಿರಿನಲ್ಲಿ ನಿತ್ಯ ಕಾಲ ಕಳೆಯುತ್ತಿದ್ದಾರೆ.

ಬಾಜಿರಾವ್ ಅವರು ತನ್ನ ಸಂಸಾರದ ಬಂಡಿ ಸಾಗಿಸಲು ಗ್ರಾಮದಲ್ಲಿ ಪಾನ್ ಶಾಪ್ ಅಂಗಡಿ ನಡೆಸುತ್ತಿದ್ದ ಇದೀಗ ಇತನಿಗೆ ಕಾಡುತ್ತಿರುವ ಕಾಯಿಲೆಯಿಂದ ಇತ ಪಾನ್ ಶಾಪ ಬಂದ ಮಾಡಿದ್ದಾನೆ. ಇತನ ನೆಚ್ಚಿಕೊಂಡಯ ಪತ್ನಿ, ತಾಯಿ ಹಾಗೂ ಇಬ್ಬರು ಮಕ್ಕಳಿರುವ ತುಂಬ ಕುಟುಂಬವಿದೆ.

ಬಾಜಿರಾವ್ ಸುಳಕುಡೆ ಅವರು ಕಳೆದ ಎರಡು ವರ್ಷಗಳಿಂದ ಲಿವರ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಇದೀಗ ಕುಟುಂಬಸ್ಥರು ಸಾಲ ಮಾಡಿ ಈಗಾಗಲೇ ನಿಪ್ಪಾಣಿ ಮತ್ತು ಬೆಳಗಾವಿಯ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಾತ್ಕಾಲಿಕವಾಗಿ ಗುಣವಾಗುತ್ತದೆ. ಆದರೆ ಮತ್ತೆ ಆರೋಗ್ಯ ಹದಗೆಡುತ್ತದೆ.

ಬಾಜಿರಾವನ ಚಿಕಿತ್ಸೆಗೆ ಇಲ್ಲಿಯವರೆಗೆ ಎಂಟು ಲಕ್ಷದವರೆಗೆ ಕುಟುಂಬಸ್ಥರು ಹಣ ಖರ್ಚ ಮಾಡಿದ್ದಾರೆ.
ಸದ್ಯ ಬೆಳಗಾವಿ ಕೆಎಲ್ ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಜಿರಾವ್ ಸುಳಕುಡೆ ಅವರ ಲಿವರ್ ವೈಪಲ್ಯವಾಗಿದ್ದು, ಲಿವರ್ ಕಸಿ ಮಾಡಬೇಕಾಗಿದೆ ಎಂದು ಅಲ್ಲಿನ ಹಿರಿಯ ವೈದ್ಯರು ಹೇಳಿದ್ದಾರೆ.

ಇದಕ್ಕೆ ಸುಮಾರು 22 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಆದರೆ ಕುಟುಂಬಸ್ಥರ ಬಳಿ ಬಿಡಿಗಾಸಿನ ಹಣವಿಲ್ಲ. ಈಗ ಲಿವರ್ ಕಸಿ ಹಾಗೂ ಇತರೆ ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲದಂತಾಗಿದೆ. ಬಾಜಿರಾವ್ ಸೂಳಕೂಡೆ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಆದಷ್ಟು ಬೇಗ ಲಿವರ್ ಕಸಿ ಮಾಡಬೇಕಾಗಿದೆ.

ಆದ್ದರಿಂದ ಜನಪ್ರತಿನಿಧಿಗಳು, ರಾಜಕೀಯ ವ್ಯಕ್ತಿಗಳು, ಸಂಘ ಸಂಸ್ಥೆಗಳು, ದಾನಿಗಳು, ನಾಗರಿಕರಿಂದ ಆರ್ಥಿಕ ನೆರವು ನೀಡುವಂತೆ ಕುಟುಂಬಸ್ಥರು ದಾನಿಗಳ ಬಳಿ ನೆರವು ಕೋರಿದ್ದಾರೆ.

ಫೆಡರಲ್ ಬ್ಯಾಂಕ್ ಖಾತೆ ಸಂಖ್ಯೆ – 19390100033095 IFSC ಕೋಡ್: FDRL0001939
ಅಥವಾ 9632731806 ಗೆ ಸಹಾಯ ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!