Select Page

Advertisement

ಚಂದ್ರಯಾನ -೦೩ ಯಶಸ್ಸಿನ ಹಿಂದಿದೆ ಬೆಳಗಾವಿ ಯುವ ವಿಜ್ಞಾನಿ ಪರಿಶ್ರಮ

ಚಂದ್ರಯಾನ -೦೩ ಯಶಸ್ಸಿನ ಹಿಂದಿದೆ ಬೆಳಗಾವಿ ಯುವ ವಿಜ್ಞಾನಿ ಪರಿಶ್ರಮ

ಬೆಳಗಾವಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಶುಕ್ರರವಾರ ಚಂದ್ರಯಾನ – ೦೩ ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದ್ದು ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ. ಬಾಹ್ಯಾಕಾಶ ವಿಜ್ಞಾನಿಗಳ ನಿರಂತರ ಪರಿಶ್ರಮದ ಫಲವಾಗಿ ಇಸ್ರೋ ಮಹತ್ವದ ಸಾಧನೆ ಮಾಡಿದ್ದು ಇದರಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಯುವ ವಿಜ್ಞಾನಿಯ ಸೇವೆ ಇರುವುದು ಹೆಮ್ಮೆಯ ಸಂಗತಿ.

ಖಾನಾಪುರ ತಾಲೂಕಿನ ಕಾಪೋಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನಗಡಿ ಗ್ರಾಮದ ಯುವ ವಿಜ್ಞಾನಿ ಪ್ರಕಾಶ ನಾರಾಯಣ ಪಡಣೇಕರ್  2019 ರಿಂದ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.. ಶುಕ್ರವಾರ ಚಂದ್ರನೆಡೆಗೆ ಧಾವಿಸಿದ ಚಂದ್ರಯಾನ – ೦೩ ಉಪಗ್ರಹದ ಯಶಸ್ವಿ ಪಯಣದ ಹಿಂದೆ ಈ ಯುವ ವಿಜ್ಞಾನಿ ಪಾತ್ರವೂ ಅಡಗಿದೆ.

32 ವರ್ಷದ ಪ್ರಕಾಶ್ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ್ದರು. ತಮ್ಮ ಇಂಜಿನಿಯರಿಂಗ್ ಪದವಿಯನ್ನು ಬೆಳಗಾವಿಯಲ್ಲಿ ಪೂರ್ಣಗೊಳಿಸಿದ್ದ ಇವರು ನಂತರ ಮುಂಬೈ ನ ವಿವಿಡಿಪಿ ವಿಶ್ವವಿದ್ಯಾಲಯದಲ್ಲಿ ಅಂತರಿಕ್ಷದಲ್ಲಿ ಮಾಸ್ಟರ್ ಡಿಗ್ರಿ ಪಡೆದರು. ವೃತ್ತಿ ಜೀವನವನ್ನು ಇಸ್ರೋದಲ್ಲಿ ಪ್ರಾರಂಭಿಸಿದ ಇವರು ಆರಂಭದಿಂದಲೂ ಮೂನ್ ಮಿಷನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಚಂದ್ರಯಾನ – ೦೨ ರಲ್ಲಿಯೂ ಸೇವೆ ಸಲ್ಲಿಸಿದ್ದ ಇವರು ಶುಕ್ರವಾರ ಉಡಾವಣೆಯಾದ ಚಂದ್ರಯಾನ – ೦೩ ರಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ.

ಚಂದ್ರಯಾನ – ೦೩ ನೌಕೆಗೆ   ಬೆಳಗಾವಿಯಿಂದ ಬಿಡಿ ಭಾಗ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೇ ಬೇಕಾದ ಉಪಕರಣ ತಯಾರಿಸುವ ಮಹತ್ವದ ಜವಾಬ್ದಾರಿ ಹೊತ್ತುಕೊಂಡ
ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಇಂಡಿಯಾ ಲಿಮಿಟೆಡ್ ಕಂಪನಿಯು ಚಂದ್ರಯಾನ – ೦೩ ಉಪಗ್ರಹದ ತಯಾರಿಕೆಗೆ ಹಲವಾರು ಬಿಡಿಬಾಗಗಳನ್ನು ಸಿದ್ಧಪಡಿಸಿ ಕೊಟ್ಟಿದೆ.

ಬೆಳಗಾವಿಯಿಂದ ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಇಂಡಿಯಾ ಲಿಮಿಟೆಡ್ ಕಂಪನಿಯಿಂದ ಗಗನ ನೌಕೆಯಲ್ಲಿ ಬಳಸಿದ್ದ ಹೈಡ್ರಾಲಿಕ್ ಉಪಕರಣ, ವಾಲ್ವ್ ಗಳು, ಸ್ಪೂಲ್ಸ್,
ಸ್ಲೀವ್ಸ್, ಮ್ಯಾನಿಪೋಲ್ಡ್ ಬ್ಲಾಕ್ಸ್, ಎಲೆಕ್ಟ್ರಾನಿಕ್ ಸೆನ್ಸಾರ್ ಗಳು ಸೇರಿದಂತೆ ವಿವಿಧ ಬಿಡಿ ಭಾಗಗಳನ್ನು ತಯಾರಿಸಿ ಇಸ್ರೋಗೆ ರವಾನಿಸಿದ್ದಾರೆ. ಕಳೆದ 15 ವರ್ಷಗಳಿಂದ ಈ ಸಂಸ್ಥೆ ಇಸ್ರೋ ದೊಂದಿಗೆ ಹೆಜ್ಜೆ ಇಡುತ್ತಿದ್ದು ಚಂದ್ರಯಾನ – ೦೨ ರ ಸಮಯದಲ್ಲಿಯೂ ಬಿಡಿ ಭಾಗ ತಯಾರಿಸಿತ್ತು.

Advertisement

Leave a reply

Your email address will not be published. Required fields are marked *

error: Content is protected !!