Select Page

ಬಸ್ ಸೀಟಿಗಾಗಿ ಕಿತ್ತಾಟ ; ಗಂಡಸರಿಗೂ ಮೀಸಲಾತಿ ಇದೆ ಎಂದ ಯುವಕ

ಬಸ್ ಸೀಟಿಗಾಗಿ ಕಿತ್ತಾಟ ; ಗಂಡಸರಿಗೂ ಮೀಸಲಾತಿ ಇದೆ ಎಂದ ಯುವಕ

ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದು ಪುರುಷರು ಹಣ ನೀಡಿ ಪ್ರಯಾಣಿಸುತ್ತಿದ್ದಾರೆ. ಆದರೆ ಮಹಿಳೆ ಒಬ್ಬರು ಕುಳಿತುಕೊಳ್ಳಲು ಸೀಟ್ ಗಾಗಿ ಜಗಳ ಮಾಡಿರುವ ವೀಡಿಯೊ ಸಧ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಹೌದು ಪುರುಷರಿಗೆ ಈಗಾಗಲೇ ಸರ್ಕಾರ ಐವತ್ತರಷ್ಟು ರಿಸರ್ವೇಶನ್ ಕಲ್ಪಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಇದರಂತೆ ಯುವಕ ಬಸ್ ನಲ್ಲಿ ಪ್ರಯಾಣಿಸುವಾಗ ಮಹಿಳೆಯೊಬ್ಬರು ಜಗಳಕ್ಕೆ ನಿಂತಿದ್ದಾರೆ.

ನಾನು ಹಣ ಕಟ್ಟಿರುವೆ ಯಾವುದೇ ಕಾರಣಕ್ಕೂ ನಿಂತುಕೊಳ್ಳಲ್ಲ ಎಂದು ಯುವಕ ಮಹಿಳೆ ಜೊತೆ ವಾದ ಮಾಡಿದ್ದಾನೆ. ಆದರೆ ಮಹಿಳೆ ಸೀಟು ಬಿಟ್ಟು ಕೊಡುವಂತೆ ವಾದ ನಡೆಸಿದ್ದು ಸಧ್ಯ ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!