BIGG BOSS ಮನೆಗೆ ಬೀಗ ; ಮನೆಯಿಂದ ಸ್ಪರ್ಧಿಗಳನ್ನು ಹೊರಹಾಕಿದ ಪೊಲೀಸರು
ಬೆಂಗಳೂರು : ಮಾಲಿನ್ಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಬಿಗ್ ಬಾಸ್ ಕನ್ನಡ ( BIGG BOSS KANNADA – 12 ) ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕುವ ಮೂಲಕ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯದೆ ಮನರಂಜನಾ ಪಾರ್ಕ ಪ್ರಾರಂಭಿಸಿದ್ದು ಹಾಗೆಯೇ ಅವೈಜ್ಞಾನಿಕ ಪಾರ್ಕ್ ನಿರ್ಮಾಣ ಮತ್ತು ತ್ಯಾಜ್ಯ ನೀರನ್ನು ಪರಿಸರಕ್ಕೆ ಬಿಟ್ಟ ಆರೋಪದ ಮೇಲೆ ಜಾಲಿವುಡ್ ಸ್ಟುಡಿಯೋ ಬಂದ್ ಮಾಡುವಂತೆ ತಹಶಿಲ್ದಾರ ನೋಟಿಸ್ ನೀಡಿದ್ದರು.
ಇನ್ನೂ ಬಿಗ್ ಬಾಸ್ ಮನೆಯಲ್ಲಿ ಸಿಲುಕಿರುವ ಎಲ್ಲಾ ಸ್ಪರ್ಧಿಗಳನ್ನು ಪೊಲೀಸರು ಹೊರ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇಡೀ ಬಿಗ್ ಬಾಸ್ ಮನೆಗೆ ವಿದ್ಯುತ್ ಕಡಿತ ಮಾಡಲಾಗಿದೆ.


