
ಸಂತಾನ ಭಾಗ್ಯಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ನಟಿ ಕತ್ರಿನಾ ಕೈಫ್ ; ಸರ್ಪಸಂಸ್ಕಾರ ಯಾಗ…! Video

ದಕ್ಷಿಣ ಕನ್ನಡ : ಸಂತಾನ ಭಾಗ್ಯಕ್ಕಾಗಿ ಬಾಲಿವುಡ್ ನ ಖ್ಯಾತ ನಟಿ ಕತ್ರಿನಾ ಕೈಫ್ ಅವರು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿನೀಡಿ ಸರ್ಪಸಂಸ್ಕಾರ ಯಾಗ ಮಾಡಿಸಿದ್ದಾರೆ.
ಆಶ್ಲೇಷ ನಕ್ಷತ್ರದ ದಿನವಾದ ಮಂಗಳವಾರ ಕ್ಷೇತ್ರಕ್ಕೆ ಆಗಮಿಸಿದ ಕತ್ರಿನಾ ಬೆಳಗ್ಗೆ ಸರ್ಪಸಂಸ್ಕಾರ ಪೂಜೆಯನ್ನು ಆದಿ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ನೆರವೇರಿಸಿದರು.
ಬಳಿಕ ಮಧ್ಯಾಹ್ನ ಕ್ಷೇತ್ರದಲ್ಲಿ ಅನ್ನಪ್ರಸಾದ ಸ್ವೀಕರಿಸಿದ್ದು, ನಾಳೆ ಬೆಳಕ್ಕೆ ಮತ್ತೆ ಸರ್ಪಸಂಸ್ಕಾರ ಸೇವೆಯ ವಿಧಿವಿಧಾನಗಳಲ್ಲಿ ಭಾಗಿಯಾಗಲಿದ್ದಾರೆ. ಸಂತಾನಪ್ರಾಪ್ತಿ, ವೃತ್ತಿ ಬದುಕಿನಲ್ಲಿ ಸಫಲತೆ ಮತ್ತು ಕುಟುಂಬದ ಯೋಗಕ್ಷೇಮದ ಉದ್ಧೇಶದಿಂದ ಕತ್ರಿನಾ ಸೇವೆಯನ್ನು ಮಾಡಿದ್ದಾರೆ.
ನಟ ವಿಕ್ಕಿ ಕೌಶಲ್ ಜೊತೆ ವಿವಾಹವಾಗಿ ಮೂರು ವರ್ಷಗಳು ಕಳೆದರೂ ಸಂತಾನ ಪ್ರಾಪ್ತಿಯಾಗದ ಹಿನ್ನಲೆಯಲ್ಲಿ ನಟಿ ಕುಕ್ಕೆಯಲ್ಲಿ ಈ ಸೇವೆ ನೆರವೇರಿಸಿದ್ದು, ನಾಳೆ ಮಧ್ಯಾಹ್ನ ತನಕ ಸರ್ಪಸಂಸ್ಕಾರ ಸೇವೆಯ ವಿಧಿ-ವಿಧಾನಗಳು ನಡೆಯಲಿದೆ.