
6 ವರ್ಷಗಳ ಸಾರ್ಥಕ ಸೇವೆ ತೃಪ್ತಿ : ಜಿ.ಎಸ್ ಸಂತೋಷ್

ಬೆಂಗಳೂರು : ಕಳೆದ 6. ವರ್ಷಗಳಿಂದ ನಮ್ಮ ಶಿಕ್ಷಣ ಸಂಸ್ಥೆ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು ಇದರಿಂದ ಪೋಷಕರ ಮೊಗದಲ್ಲಿ ಸಂತೋಷ ಮೂಡಿದ್ದು ಸಾರ್ಥಕ ಕ್ಷಣ ಎಂದು ಎ ಕಿಡ್ಸ್ ಮಾಂಟೆಸರಿ ಶಾಲೆಯ ಪ್ರಾಂಶುಪಾಲ ಜಿ.ಎಸ್ ಸಂತೋಷ್ ಅಭಿಪ್ರಾಯಪಟ್ಟರು.
ನಗರದ ಅತ್ತಿಬೆಲೆಯಲ್ಲಿರುವ ಎ ಕಿಡ್ಸ್ ಮಾಂಟೆಸರಿ ಶಾಲೆಯಲ್ಲಿ ಜರುಗಿದ ಪದವಿ ದಿನ ಹಾಗೂ ಚಿಣ್ಣರ ಘಟಿಕೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ವಿಭಿನ್ನ ಆಯಾಮದಲ್ಲಿ ಶಿಕ್ಷಣ ನೀಡುತ್ತಿದೆ. ಇದರಿಂದ ಮಕ್ಕಳು ಗುಣಾತ್ಮಕ ಶಿಕ್ಷಣ ಶಿಕ್ಷಣದ ಜೊತೆಗೆ ಸೃಜನಶೀಲ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ ಎಂದರು.

ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವ ವಿಭಿನ್ನ ಕಾರ್ಯಕ್ರಮ ಹಾಗೂ ಸೇವೆ ಗುರುತಿಸಿ ವರ್ತಿ ವೆಲ್ನೆಸ್ ಫೌಂಡೇಶನ್ ಸಂಸ್ಥೆ ವಿಶ್ವರತ್ನ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿದ್ದು ಸಂತೋಷದ ಕ್ಷಣ ಎಂದರು.
ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮಕ್ಕಳಿಗೆ ಶೈಕ್ಷಣಿಕ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.