ಪ್ರೀತಿಸಿದವಳನ್ನು ಕತ್ತರಿಸಿ ತಾನೂ ಆತ್ಮಹತ್ಯೆ ; ಬೆಳಗಾವಿಯಲ್ಲಿ ಜೋಡಿ ಹಕ್ಕಿ ಸಾವು
ಬೆಳಗಾವಿ : ಮದುವೆಗೆ ನಿರಾಕರಣೆ ಮಾಡಿದ್ದಕ್ಕೆ ಸಿಟ್ಟಿಗೆದ್ದು ಯುವತನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ.
ನಗರ ನಿವಾಸಿ ಐಶ್ವರ್ಯ ಲೋಹಾರ್ (18) ಹಾಗೂ ಯಳ್ಳೂರು ಗ್ರಾಮದ ಪ್ರಶಾಂತ ಕುಂಡೇಕರ್ ( 29 ) ಮೃತ ದುರ್ದೈವಿಗಳು. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಪ್ರಶಾಂತ್ ಕೆಲ ದಿನಗಳಿಂದ ಐಶ್ವರ್ಯ ನನ್ನು ಪ್ರೀತಿಸುತ್ತಿದ್ದ.
ಐಶ್ವರ್ಯ ತಾಯಿ ಜೊತೆ ಮದುವೆ ವಿಚಾರ ಪ್ರಸ್ತಾಪಿಸಿದ್ದಕ್ಕೆ ಆಕೆ ಮದುವೆ ಬೇಡ, ಚನ್ನಾಗಿ ಕೆಲಸ ಮಾಡಿ ಜೀವನ ಕಟ್ಟಿಕೊಳ್ಳುವಂತೆ ಪ್ರಶಾಂತ್ ಗೆ ಬುದ್ದಿವಾದ ಹೇಳಿದ್ದಳು. ಇಷ್ಟಕ್ಕೆ ಕೋಪಗೊಂಡ ಪ್ರಶಾಂತ್ ಮಂಗಳವಾರ ಸಂಜೆ ಐಶ್ವರ್ಯ ಭೇಟಿಗೆ ಬಂದಿದ್ದಾನೆ.
ನಾಥ್ ಪೈ ವೃತ್ತದ ಬಳಿ ಇರುವ ಐಶ್ವರ್ಯ ಚಿಕ್ಕಮ್ಮನ ಮನೆಯಲ್ಲಿ ಇಬ್ಬರು ಸೇರಿದ್ದಾರೆ. ಈ ಸಂದರ್ಭದಲ್ಲಿ ವಿಷದ ಬಾಟಲಿ ತಂದಿದ್ದ ಪ್ರಶಾಂತ್ ಐಶ್ವರ್ಯ ಗೆ ಕುಡಿಸಲು ಬಲವಂತ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆಕೆ ವಿರೋಧ ಮಾಡಿದ್ದಕ್ಕೆ ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದು ಐಶ್ವರ್ಯ ಸ್ಥಳದಲ್ಲೇ ಸಾವಣಪ್ಪಿದ್ದಾಳೆ, ವಿಚಲಿತನಾದ ಪ್ರಶಾಂತ್ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

