
ಯುವತಿಗೆ ಚಿತ್ರಹಿಂಸೆ ; ಬೆಳಗಾವಿ ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ : ಯುವತಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ಕೊಟ್ಟು ತನ್ನ ಪತಿ ಹಾಗೂ ಮನೆಯವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವಂತೆ ಪೀಡಿಸುತ್ತಿದ್ದ ಬೆಳಗಾವಿ ಬಿಜೆಪಿ ಮುಖಂಡ ಎಂದು ಹೇಳಿಕೊಳ್ಳುವ ಪೃಥ್ವಿ ಸಿಂಗ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.
ನಗರದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪೃಥ್ವಿ ಸಿಂಗ್ ಹಾಗೂ ಆತನ ಪುತ್ರ ಜಸ್ವಿರಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದೆ. ನನ್ನ ಗಂಡನ ವಿರುದ್ಧ ಸುಳ್ಳು ಆರೋಪ ಮಾಡುವ ಉದ್ದೇಶದಿಂದ ನನಗೆ ವಿಷ ಕುಡಿಸಲಾಗಿತ್ತು.
ನನ್ನನ್ನು ಗೃಹ ಬಂಧನದಲ್ಲಿ ಇರಿಸಿಕೊಂಡು ಪತಿ ಹಾಗೂ ಮಾವನ ವಿರುದ್ಧ ದೂರು ನೀಡುವಂತೆ ಪೃಥ್ವಿ ಸಿಂಗ್ ಪೀಡಿಸುತ್ತಿದ್ದ ಎಂದು ಯುವತಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ.
ಬಿಜೆಪಿ ಪಕ್ಷದ ಹೆಸರು ಹೇಳಿಕೊಂಡು ಇಷ್ಟೆಲ್ಲಾ ಅವಾಂತರ ಸೃಷ್ಟಿ ಮಾಡುತ್ತಿರುವ ಪೃಥ್ವಿ ಸಿಂಗ್ ನಿಜಕ್ಕೂ ಬಿಜೆಪಿ ಮುಖಂಡನಾ ಇಲ್ಲ ಕಾರ್ಯಕರ್ತನಾ ಅಥವಾ ಅವನಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು.
ಪ್ರಕರಣದ ಮೂಲ : ನನಗೆ ಗಂಡನ ಮನೆಯವರು ವರದಕ್ಷಿಣೆ ಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ, ಎಂದು ಆರೋಪಿಸಿ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾದ ಪ್ರಕರಣ ನಡೆದಿತ್ತು. ಜೊತೆಗೆ ಮಾಧ್ಯಮಗಳ ಮುಂದೆ ಯುವತಿ ತನ್ನ ಪತಿ ಹಾಗೂ
ಮಾವನ ವಿರುದ್ಧ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಳು. ಆದರೆ ಈಗ ತನಗೆ ಆಶ್ರಯ ನೀಡಿದ್ದ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಇಷ್ಟೆಲ್ಲಾ ಘಟನೆಗೆ ಕಾರಣ ಎಂದು ಉಲ್ಟಾ ಹೊಡೆದಿದ್ದಾಳೆ.