Select Page

ಗೃಹಲಕ್ಷ್ಮೀ ಹಣ ಜಮೆ ಯಾವಾಗ ; ಸಚಿವರಿಂದ ಮೇಜರ್ ಅಪ್ಡೇಟ್

ಗೃಹಲಕ್ಷ್ಮೀ ಹಣ ಜಮೆ ಯಾವಾಗ ; ಸಚಿವರಿಂದ ಮೇಜರ್ ಅಪ್ಡೇಟ್Score 0%Score 0%

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಕಳೆದ ಎರಡು ಕಂತಿನ ಹಣ ಯಾವಾಗ ಎಂಬ ಪ್ರಶ್ನೆ ಮಹಿಳೆಯರಲ್ಲಿ ಮೂಡಿದ್ದು ಈ ಕುರಿತು ಸಚಿವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಹೌದು ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಾಗುವ ಮುಂಚಿತವಾಗಿ ಗೃಹ ಲಕ್ಷ್ಮೀ ಯೋಜನೆ ಕಂತು ಮಹಿಳೆಯರ ಅಕೌಂಟ್ ಗೆ ಜಮೆ ಮಾಡಲಾಗಿತ್ತು. ನಂತರ ಎರಡು ತಿಂಗಳು ಅವಧಿಯ ಚುನಾವಣೆ ನಂತರ ಈವರೆಗೂ ಕೆಲವರಿಗೆ ಹಣ ಬಂದಿಲ್ಲ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ನೀಡಿದ್ದು. ನಾವು ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮೀ ಯೋಜನೆ ನಿಲ್ಲಿಸಲ್ಲ. ಸಧ್ಯದಲ್ಲೇ ಬಾಕಿ ಕಂತಿನ ಹಣವನ್ನು ಮಹಿಳೆಯರ ಅಕೌಂಟ್ ಗೆ ಜಮೆ ಮಾಡುವ ಭರವಸೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಈ ಬಾರಿ ಗೃಹ ಲಕ್ಷ್ಮೀ ಹಣ ಬಿಡುಗಡೆ ಮಾಡುವಲ್ಲಿ ಒಂದು ತಿಂಗಳು ತಡವಾಗಿರಬಹುದು. ಆದರೆ ಯೋಜನೆ ಸ್ಥಗಿತ ಮಾಡಲ್ಲ. ಬರುವ ದಿನಗಳಲ್ಲಿ ಹಣ ಬಿಡುಗಡೆ ಮಾಡುವ ಭರವಸೆಯನ್ನು ಸಚಿವೆ ಹೆಬ್ಬಾಳಕರ್ ನೀಡಿದ್ದಾರೆ.

Review

0%

##
0%
Advertisement

Leave a reply

Your email address will not be published. Required fields are marked *

error: Content is protected !!