ಬೆಳಗಾವಿ : ಭೀಕರ ಅಪಘಾತ ವ್ಯಕ್ತಿ ಬಲಿ
ಬೆಳಗಾವಿ : ಭಾರೀ ವಾಹನಗಳ ಉಪಟಳ ಬೆಳಗಾವಿ ನಗರದಲ್ಲಿ ಹೆಚ್ಚಾಗಿದ್ದು, ಸಾಂಬ್ರಾ ರಸ್ತೆಯಲ್ಲಿ ಮಗದೊಂದು ಭಾರೀ ವಾಹನಕ್ಕೆ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ವಿಠ್ಠಲ್ ಎಂದು ಗುರುತಿಸಲಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹೊರಟ್ಟಿದ್ದವನ ಮೇಲೆ ಭಾರೀ ವಾಹನವೊಂದು ಹಾಯ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಭಾರೀ ವಾಹನ ಎಲ್ಲಿಂದ ಎಲ್ಲಿಗೆ ಹೊರಟ್ಟಿತ್ತು ಎಂಬ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.