
ಮಲೇರಿಯಾ ರೋಗದ ಕುರಿತು ಜಾಗೃತಿ ಅಗತ್ಯ ; ವಿಠ್ಠಲ ಆವೋಜಿ

ಕಕ್ಕೇರಿ : ಸುತ್ತಲಿನ ಪರಿಸರ ಸ್ವಚ್ಚತೆಯಿಂದ ಇಟ್ಟುಕೊಂಡರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಮಲೇರಿಯಾ ರೋಗದ ಕುರಿತು ಮಕ್ಕಳಿಗೆ ಜಾಗೃತಿ ನಡೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಆರೋಗ್ಯ ಅಧಿಕಾರಿ ವಿಠ್ಠಲ ಆವೋಜಿ ಹೇಳಿಕೆ ನೀಡಿದರು.
ಕಕ್ಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಲಿಂಗನಮಠ ಸರಕಾರಿ ಪ್ರೌಢ ಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು.
ಸೊಳ್ಳೆಗಳ ಜೀವನ ಚಕ್ರದಿಂದ ಮಲೇರಿಯಾ ಕಾಯಿಲೆ ಹರಡುತ್ತದೆ. ನಿಶ್ಶಕ್ತಿ , ವಾಕರಿಕೆ , ಚಳಿ ಜ್ವರ ,ಮೈ ಕೈ ನೋವು , ತಲೆನೋವು ಈ ರೀತಿಯ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ರಕ್ತವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು. ನೀರು ಒಂದೆಡೆ ಸಂಗ್ರಹವಾಗದಂತೆ ಜಾಗೃತವಹಿಸಿ, ನಿರುಪಯುಕ್ತ ವಸ್ತುಗಳನ್ನು ವ್ಯವಸ್ಥಿತವಾದ ವಿಲೇವಾರಿ ಮಾಡಬೇಕು ಎಂದರು.
ಶಿಕ್ಷಕ ಜೆ.ಎ ಚಿಕ್ಕೋಡಿ ಮಾತನಾಡಿ ವಿದ್ಯಾರ್ಥಿಗಳು ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು. ಸರಕಾರ ಆರೋಗ್ಯ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪಿ ಸಿ ಸಣ್ಣಾರ ,
ವಿ ಎಸ್ ದೇಶಪಾಂಡೆ, ಎಸ್ ಎಸ್ ಅಂಗಡಿ, ಸಿ ಎಸ್ ಕೋಳಿ , ಎಮ್ ಎಮ್ ಮುಳುಗುಂದ ,ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪೂನಮ್ ನಾಯಕ್ , ವಾಯಲೇಟ್ ಪೌಲ್ , ಗುರುಪಾದ ವಾಲಿ , ಸವಿತಾ ಉಡಕೇರಿ , ಭಾರತಿ ಇಳಿಗೇರ, ಆಶಾ ಕಾರ್ಯಕರ್ತೆ ಸುಮಿತ್ರಾ ಹಿರೇಮಠ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.