
ಸಿ.ಟಿ ರವಿ ವಿರುದ್ಧ ಹೆಬ್ಬಾಳಕರ್ ದೂರು ; ಅಚ್ಚರಿ ಹೇಳಿಕೆ ಕೊಟ್ಟ ಸಭಾಪತಿ ಹೊರಟ್ಟಿ

ಬೆಳಗಾವಿ : ವಿಧಾನ ಪರಿಷತ್ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ಬಂದಿದೆ. ಇತ್ತ ಸಿಒಡಿ ತನಿಖೆ ಮುಂದುವರಿದಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಿ.ಟಿ ರವಿ ವಿರುದ್ಧ ಸಭಾಪತಿ ಅವರಿಗೆ ದೂರು ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಹೊರಟ್ಟಿ ಅವರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ವೀಡಿಯೋ ಸಾಕ್ಷಿ ಸಮೇತ ದೂರು ನೀಡಿದ್ದಾರೆ. ಎರಡೂ ಕಡೆ ದೂರು ಹಾಗೂ ಸಾಕ್ಷಿ ಬಂದಿದ್ದು ಸೂಕ್ತ ಪರಾಮರ್ಶೆ ನಡೆಸಿ ಎಫ್ಎಸ್ಎಲ್ ಗೆ ಕಳುಹಿಸಿ, ಆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಯಾವುದೇ ಹೆಣ್ಣುಮಗಳು ಇಂತಹ ಪ್ರಕರಣದಲ್ಲಿ ತನ್ನ ವಿರುದ್ಧ ಮಾತನಾಡದೆ ಆರೋಪ ಮಾಡುವುದಿಲ್ಲ. ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳು ಇದ್ದಾರೆ. ಹೆಬ್ಬಾಳಕರ್ ಮರ್ಯಾದೆ ವಿಷಯಕ್ಕೆ ನಾವು ಜವಾಬ್ದಾರಿ ಆಗುತ್ತೇವೆ. ಇಡೀ ದೇಶಕ್ಕೆ ಈ ವಿಷಯ ಹೋಗಿದ್ದು ಬಹಳ ಎಚ್ಚರಿಕೆಯಿಂದ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.