ಬೆಳಗಾವಿಯಲ್ಲಿ ನಿಗೂಢ ಬಲೂನ್ ಪತ್ತೆ ; ಏನಂದ್ರು ಪೊಲೀಸರು?
ಬೈಲಹೊಂಗಲ : ಹವಾಮಾನ ಇಲಾಖೆಗೆ ಸಂಭಂದಿಸಿದ ಬೃಹತ್ ಗಾತ್ರದ ಬಲೂನ್ ಒಂದು ಹಾರಿ ರೈತರ ಹೊಲದಲ್ಲಿ ಬಿದ್ದಿದ್ದು ಜನರಲ್ಲಿ ಕೆಲಹೊತ್ತು ಆತಂಕ ಮೂಡಿಸಿದ ಘಟನೆ ನಡೆದಿದೆ.
ಬೈಲಹೊಂಗಲ ತಾಲೂಕಿನ ಗದ್ದಿಕೊರವಿನಕೊಪ್ಪ ಗ್ರಾಮದ ರೈತರ ಹೊಲವೊಂದರಲ್ಲಿ ಬೃಹತ್ ಗಾತ್ರದ ಬಿಳಿ ಬಣ್ಣ ಬಲೂನ್ ಹಾರಿ ಬಿದ್ದಿತ್ತು. ಇದು ಕಂಡುಬರುತ್ತಿದ್ದಂತೆ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಲೂನ್ ಒಳಗೆ ಇಲೆಕ್ಟ್ರಾನಿಕ್ ವಸ್ತುಗಳು ಇರುವುದು ಕಂಡುಬಂದಿದೆ.
—-ಏನಂದ್ರು ಎಸ್ಪಿ —–
ಈ ಕುರಿತು ಪ್ರಾಥಮಿಕ ಮಾಹಿತಿ ನೀಡಿರುವ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್. ಈಗಾಗಲೇ ಬಲೂನ್ ಕುರಿತು ಮಾಹಿತಿ ಪಡೆಯಲಾಗಿದ್ದು ಅವುಗಳಲ್ಲಿ ಬಳಸಲಾದ ಇಲೆಕ್ಟ್ರಾನಿಕ್ ವಸ್ತುಗಳು ಹವಾಮಾನ ಇಲಾಖೆಯಲ್ಲಿ ಬಳಸುವ ಸಾಧನಗಳಾಗಿವೆ.
ಸಾಮಾನ್ಯವಾಗಿ ಈ ವಸ್ತುಗಳನ್ನು, ಎತ್ತರದ ತಾಪಮಾನದ ಆರ್ದ್ರತೆ, ಗಾಳಿಯ ವೇಗ, ಗಾಳಿಯ ಒತ್ತಡ ಇತ್ಯಾದಿಗಳನ್ನು ಮೇಲ್ವಿಚಾರಣೆ ಮಾಡಲು ಬಳಸುವ ಏಕೈಕ ಸಾಧನವಾಗಿದೆ ಎಂದು ತಿಳಿಸಿದರು.