ಬದಲಾವಣೆ ಬೆಳಕು ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ
ಹುಕ್ಕೇರಿ : ಗ್ರಾಮೀಣ ಭಾಗದ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಇದ್ದು ಸಕರ್ಸರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಅತ್ಯಂತ ಜವಾಬ್ದಾರಿಯುತ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಬದಲಾವಣೆ ಬೆಳಕು ಫೌಂಡೇಶನ್ ಅಧ್ಯಕ್ಷ ಶಿವು ಹಿರಟ್ಟಿ ಹೇಳಿದರು.
ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದ ಬಸವೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಸೋಮವಾರ ಕಾರ್ಯಕ್ರಮ ಜರುಗಿತು. ಬದಲಾವಣೆ ಬೆಳಕು ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತ ಬುಕ್ ವಿತರಣೆ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶಿವಾನಂದ ಹಿರಟ್ಟಿ ಮಾತನಾಡಿ. ಬದಲಾವಣೆ ಬೆಳಕು ಸಂಸ್ಥೆಯು ದಿ. ಡಾ. ಪುನೀತ್ ರಾಜಕುಮಾರ ಅವರ ನೆನಪಿನಲ್ಲಿ ಕಾರ್ಯ ಮಾಡುತ್ತಿದೆ. ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಅಪ್ಟೆಕ್ ಸಂಸ್ಥೆಯ ಎಂಡಿ ವಿನೋದ ಭಾಮನೆ ಮಾತನಾಡಿ. ಬದಲಾವಣೆ ಬೆಳಕು ಫೌಂಡೇಶನ್ ಸಮಾಜಸೇವೆ ನಮಗೆಲ್ಲ ಮಾದರಿ. ಮಕ್ಕಳು ಶಿಕ್ಷಣದಿಂದ ವಂಚಿತರಾಗದೇ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ಮತ್ತಷ್ಟು ಕಾರ್ಯಗಳು ಸಂಸ್ಥೆಯ ವತಿಯಿಂದ ನಡೆಯಲಿ ಎಂದರು. ಬದಲಾವಣೆ ಬೆಳಕು ಸಂಸ್ಥೆಯ ನಿರ್ದೇಶಕರಾದ ಗೀತಾ ಹಿರಟ್ಟಿ ಮಾತನಾಡಿ. ನಮ್ಮ ಸಂಸ್ಥೆಯ ಮೂಲ ಉದ್ದೇಶ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು. ಈ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದೇವೆ ಎಂಬ ದೃಢ ವಿಶ್ವಾಸದಿಂದ ಮುನ್ನಡೆಯುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಮಾಜಪರ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಅಪ್ಟೆಕ್ ಸಂಸ್ಥೆ ಮ್ಯಾನೆಂಜರ್ ಪ್ರಕಾಶ್ ಪಾಟೀಲ್, ಬದಲಾವಣೆ ಬೆಳಕು ಸಂಸ್ಥೆಯ ಸದಸ್ಯರಾದ ಅಕ್ಷತಾ ನಾಯಿಕ, ಭೀಮು ನಾಯಿಕ, ನೀತಾ ಪಟ್ಟಣಶೆಟ್ಟಿ, ಸಚೀನ್ ನಾಯಿಕ, ಅನೀಲ್ ಗುಂಟಾಳ, ಲಕ್ಷ್ಮೀ ಇಟಗಿ, ಅಕ್ಷತಾ, ಕೋಮಲ್ ಸೇರಿದಂತೆ ಸಂಸ್ಥೆ ಮುಖಂಡರು ಭಾಗವಹಿಸಿದ್ದರು.