Select Page

ಅಥಣಿ : ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೇನೆಡ್ ಬಾಂಬ್ ಪತ್ತೆ, ಗಡಿಯಲ್ಲಿ ಆಂತಕ

ಅಥಣಿ : ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೇನೆಡ್ ಬಾಂಬ್ ಪತ್ತೆ, ಗಡಿಯಲ್ಲಿ ಆಂತಕ

ಅಥಣಿ : ಬೆಳಗಾವಿ ಜಿಲ್ಲೆಗೆ ಗಡಿ ಹೊಂದಿರುವ ಮಹಾರಾಷ್ಟ್ರದ ರಾಜ್ಯದ ಜತ್ತ ತಾಲೂಕಿನ ಶಾಲೆ ಒಂದರಲ್ಲಿ ಹ್ಯಾಂಡ್ ಗ್ರೇನೆಡ್ ಬಾಂಬ್ ದೊರೆತಿದ್ದು. ಗಡಿಭಾಗದಲ್ಲಿ ಅಥಣಿಯಲ್ಲು ಆತಂಕಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಗೆ ಗಡಿ ಹೊಂದಿರುವ ಮಹಾರಾಷ್ಟ್ರದ ಜತ್ ತಾಲೂಕಿನ ಕುಡನೂರು ಗ್ರಾಮದ ಮರಾಠಿ ಶಾಲೆಯಲ್ಲಿ ಬಾಂಬ್ ಪತ್ತೆಯಾಗಿದ್ದು. ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಶಾಲೆಯಲ್ಲಿ ಮಕ್ಕಳು ಬಾಲ್ ಎಂದು ಕೊಂಡು ಆಟವಾಡುತ್ತಿರುವುದನ್ನು ಕೆಲವು ಗ್ರಾಮಸ್ಥರು ನೋಡಿ ಸಾಂಗ್ಲಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಬಾಂಬ್ ನಿಸ್ಕ್ರಿಯದಳ ಪರಿಶೀಲನೆ ನಡೆಸಿ ಹ್ಯಾಂಡ್ ಗ್ರೇನೆಡ್ ಬಾಂಬ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ಅಧಿಕಾರಿಗಳು ಗ್ರಾಮದ ತುಂಬೆಲ್ಲ ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಿದ್ದು ಹ್ಯಾಂಡ್ ಗ್ರಾನೆಟ್ ಬಿಟ್ಟರೆ ಬೇರೆ ಯಾವುದೂ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಹ್ಯಾಂಡ್ ಗ್ರೇನೆಡ್ ಮೇಲೆ ಉರ್ದು ಭಾಷೆಗಳ ಲಿಪಿ ಇರುವುದರಿಂದ ಗಡಿಭಾಗದಲ್ಲಿ ಉಗ್ರ ಚಟುವಟಿಕೆಗಳ ತಾನವಾಗಿದೆಯಾ ಎಂದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Advertisement

Leave a reply

Your email address will not be published. Required fields are marked *