ಥ್ರೋಬಾಲ್ : ಸಪ್ತಸಾಗರ ಪ್ರೌಢ ಶಾಲೆ ವಿದ್ಯಾರ್ಥಿನಿಯರಿಗೆ ಗೆಲುವು
ಅಥಣಿ : ತಾಲೂಕಿನ ಸಂಕೋನಟ್ಟಿಯಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದ ಥ್ರೋಬಾಲ್ ಪಂದ್ಯಾವಳಿಯ ಮಹಿಳೆಯರ ವಿಭಾಗದಲ್ಲಿ, ಸಪ್ತಸಾಗರ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಗೆಲುವು ಸಾಧಿಸಿದ್ದಾರೆ.
ಶನಿವಾರ ನಡೆದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿನಿಯರ ಥ್ರೋಬಾಲ್ ತಂಡ ಗೆಲುವು ಸಾಧಿಸಿದೆ. ಇನ್ನೂ ವಿವಿಧ ವಿಭಾಗದಲ್ಲಿ ಸಪ್ತಸಾಗರ ಪ್ರೌಢ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಮೂರು ಸಾವಿರ ಮೀ. ಓಟ : ವಿಶಾಲ ಕಂಕನವಾಡಿ – ದ್ವಿತೀಯ
800 ಮೀ. ಓಟ : ಅಮೀತ್ ಕುಂಬಾರ – ಪ್ರಥಮ
ಗುಂಡು ಎಸೆತ : ಆದಿತ್ಯ ಕೋಳಿ – ಪ್ರಥಮ
ತ್ರಿವಿಧ ಜಿಗಿತ : ಚಿದಾನಂದ ಮಾಂಗ್ – ದ್ವಿತೀಯ
ಚಕ್ರ ಎಸೆತ : ಧನಶ್ರೀ ಬಿರಾದಾರ – ಪ್ರಥಮ
ತ್ರಿವಿಧ ಜಿಗಿತ : ಭಾಗೀರತಿ ಕಾಂಬಳೆ – ದ್ವಿತೀಯ
ಸ್ಕಿಪಿಂಗ್ : ಸುಶ್ಮಿತಾ ಸನದಿ : ಪ್ರಥಮ
1,500 ಮೀ. ಓಟ : ತ್ರಿಶಲಾ ಪಾಟೀಲ್ ತೃತೀಯ
ಸಪ್ತಸಾಗರ ಪ್ರೌಢ ಶಾಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ತೋರಿದ ಈ ಸಾಧನಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ.ಕೆ ಲಮಾನಿ, ದೈಹಿಕ ಶಿಕ್ಷಕರಾದ ಅವರಾದಿ. ಸಹ ಶಿಕ್ಷಕರಾದ ಬಾಹುಬಲಿ ಸಸಾಲಟ್ಟಿ, ಬಿ.ಪಿ ಗಡ್ಡೆಣ್ಣವರ್, ಎ.ಕೆ ಕುಂಬಾರ ಸೇರಿದಂತೆ ಮಕ್ಕಳ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.