Select Page

Advertisement

ಅಥಣಿ : ವಿದ್ಯುತ್ ಅವಘಡ ; ಎಂಟು ಎಕರೆ ಕಬ್ಬು ಬೆಳೆ ಸುಟ್ಟು ಕರಕಲು

ಅಥಣಿ : ವಿದ್ಯುತ್ ಅವಘಡ ; ಎಂಟು ಎಕರೆ ಕಬ್ಬು ಬೆಳೆ ಸುಟ್ಟು ಕರಕಲು

ಅಥಣಿ : ವಿದ್ಯುತ್ ಅವಘಡ ಸಂಭವಿಸಿ ಎಂಟು ಎಕರೆ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಣ ಮುರಿಗೆಪ್ಪ ಶೇಗಾವಿ ಎಂಬುವವರಿಗೆ ಸೇರಿದ್ದ ಸುಮಾರು 8 ಎಕರೆ ಕಬ್ಬು ಬೆಳೆ ಸುಟ್ಟಿದೆ. ಮಂಗಳವಾರ ಮಧ್ಯಾಹ್ನ ತೋಟದಲ್ಲಿ ವಿದ್ಯುತ್ ಅವಘಡದಿಂದ ಘಟನೆ ಸಂಭವಿಸಿದೆ.

ಕಬ್ಬು ಬೆಳೆಗೆ ಬೆಂಕಿ ತಗಲುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು ಆ ವೇಳೆಗಾಗಲೇ ಲಕ್ಷಾಂತರ ಮೌಲ್ಯದ ಕಬ್ಬು ಬೆಳೆ ನಾಶವಾಗಿದೆ.
ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!