ಅಥಣಿ : ಕೆನಾಲ್ ಕಾಲುವೆಯಲ್ಲಿ ಮೃತ ದೇಹ ಪತ್ತೆ
ಅಥಣಿ : ತಾಲೂಕಿನ ಹೊರವಲಯದ ಏತ ನೀರಾವರಿ ಕಾಲುವೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ.
ತಾಲೂಕಿನ ಯಂಕಂಚ್ಚಿ ಗ್ರಾಮದ ಹೊರವಲಯದ ಏತ ನೀರಾವರಿ ಯೋಜನೆ ಕಾಲುವೆಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಐಗಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮೃತ ವ್ಯಕ್ತಿ ಗುರುತು ಪತ್ತೆಯಾಗಿಲ್ಲ.
ದೇಹದಲ್ಲಿರುವ ವಸ್ತುಗಳು ಹಾಗೂ ಚಿತ್ರಗಳನ್ನು ಪೊಲೀಸರು ಗುರುತಿಸಿ ಈ ವಕ್ತಿಯ ಮಾಹಿತಿ ಇದ್ದರೆ ಐಗಳಿ, ಅಥಣಿ ಪೊಲೀಸರನ್ನು ಸಂಪರ್ಕಿಸುವಂತೆ ಆರಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಕೋಲೆ ಶಂಕೆ ಎಂದು ಪೊಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತಂತೆ ಐಗಳಿ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ