ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ಮರು ನೇಮಕ
ದೆಹಲಿ : ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ಅವರನ್ನು ಸತತ ಮೂರನೇ ಬಾರಿಗೆ ಆಯ್ಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಸುಧೀರ್ಘ ಅವದಿಗೆ ಪ್ರಧಾನಿ ಮೋದಿ ಸರ್ಕಾರದಲ್ಲಿ ಅಜಿತ್ ದೋವಲ್ ಭದ್ರತಾ ಸಲಹೆಗಾರರಾಗಿ ಮುಂದುವರಿದಿದ್ದಾರೆ. 1968 ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿರುವ ದೋವಲ್ ಅವರು ಒಬ್ಬ ಚಾಣಾಕ್ಷ ಅಧಿಕಾರಿ. ದೇಶದ ಭದ್ರತೆ ವಿಷಯದಲ್ಲಿ ಇವರ ಅದ್ಬುತ ಕಾರ್ಯವೈಖರಿಯನ್ನು ದೇಶದ ಜನ ಕೊಂಡಾಡುತ್ತಾರೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿಯರವ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕೆ ಮಿಶ್ರಾ ಅವರನ್ನು ಮರು ನೇಮಕ ಮಾಡಲಾಗಿದೆ. 1972 ರ ಬ್ಯಾಚ್ ನ ನಿವೃತ್ತ ಅಧಿಕಾರಿಯಾಗಿರುವ ಇವರು ಸಧ್ಯ ಮೋದಿಯವರ ಪ್ರಧಾನ ಕಾರ್ಯದರ್ಶಿ. ಈ ಇಬ್ಬರು ಅಧಕಾರಿಗಳಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗುತ್ತದೆ.