ಪೊಲೀಸ್ ದಿವ್ಯ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ
ಬೆಳಗಾವಿ : ಪೊಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ನಗರದಲ್ಲಿ ಭಾರೀ ವಾಹನ ನಿಷೇಧ ಮಾಡದ ಹಿನ್ನೆಲೆಯಲ್ಲಿ ಖಾನಾಪುರದಿಂದ ಬೆಳಗಾವಿಗೆ ಕಬ್ಬಿಣದ ರಾಡ್ ತುಂಬಿಕೊಂಡು ಹೋರಟ್ಟಿದ್ದ ಲಾರಿ ಹರಿದು ಅರಹಾನ ಫಾರುಕ್ ಫೇಪಾರ್ 10 ಇಸ್ಲಾಮೀಯಾ ಉರ್ದು ಶಾಲೆಯ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಮೀನಿನ ಮಾರುಕಟ್ಟೆ ಬಳಿ ನಡೆದಿದೆ.
ಅತೀಕಾ ಅಪ್ಸಾಂ ಫಾರುಕ ಫೇಜಾರ್ (18 ) ಸೇರಿದಂತೆ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿ ನಗರದಲ್ಲಿ ಸೋಮವಾರ ಬೆಳಗಿನ ಜಾವ 16 ವರ್ಷದ ವಿದ್ಯಾರ್ಥಿನಿ ಭಾರೀ ವಾಹನಕ್ಕೆ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದ್ದು ಪೊಲೀಸ್ ಇಲಾಖೆಯ ನಿರ್ಲಕ್ಷ್ಯತವೇ ಕಾರಣ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಸಾರ್ವಜನಿಕರ ಹಿತ ದೃಷ್ಠಿಯಿಂದ ನಗರದಲ್ಲಿ ಭಾರೀ ವಾಹನ ಸಂಚಾರ ನಿಷೇಧ ಮಾಡುವ ನಿರ್ಧಾರ ಮಾಡಿದ್ದರೇ ಈ ಘಟನೆ ನಡೆಯುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶದ ಮಾತಾಗಿವೆ.
ಸ್ಥಳಕ್ಕೆ ಕ್ಯಾಂಪ್ ಹಾಗೂ ದಕ್ಷಿಣ ಸಂಚಾರ ಪೊಲೀಸ್ ರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.