Select Page

Advertisement

ರಾಜ್ಯದ ಜನ ನನ್ನ ಕ್ಷಮಿಸಿ ; ನನ್ನ ಮಗನಿಂದ ತಪ್ಪಾಗಿದೆ ಎಂದ ನೇಹಾ ಹಂತಕನ ತಂದೆ

ರಾಜ್ಯದ ಜನ ನನ್ನ ಕ್ಷಮಿಸಿ ; ನನ್ನ ಮಗನಿಂದ ತಪ್ಪಾಗಿದೆ ಎಂದ ನೇಹಾ ಹಂತಕನ ತಂದೆ

ಬೆಳಗಾವಿ : ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಹಿರೇಮಠ ಹತ್ಯೆಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು ಕೊಲೆ ಆರೋಪಿ ಫಯಾಜ್ ತಂದೆ ಘಟನೆ ನೆನೆದು‌ ಕಣ್ಣೀರು ಹಾಕಿದ್ದಾರೆ.

ಮಗನಿಂದ ಇಂತಹ ಹ್ಯೇಯ ಕೃತ್ಯ ನಡೆಯುತ್ತದೆ ಎಂದುಕೊಂಡಿರಲಿಲ್ಲ. ಪಾಪ ಆ ಹೆಣ್ಣು ಮಗುವನ್ನು ಈ ರೀತಿ ಹತ್ಯೆ ಮಾಡಿದ್ದು ಮನಸ್ಸಿಗೆ ನೋವು ತರಿಸಿದೆ. ರಾಜ್ಯದ ಜನ ನನ್ನ ಕ್ಷಮಿಸಿ, ನನ್ನ ಮಗನಿಗೆ ಕಠಿಣ ಶಿಕ್ಷೆ ‌ನೀಡಿ ಎಂದು ಹಂತಕನ ತಂದೆ ಅಳಲನ್ನು ತೋಡಿಕೊಂಡಿದ್ದಾನೆ.

ಇನ್ನೂ ವಿದ್ಯಾರ್ಥಿನಿ ನೇಹಾ ಸಾವಿಗೆ ಅನೇಕರು‌ ಕಂಬನಿ ಮಿಡಿದಿದ್ದು ಆರೋಪಿತನನ್ನು ಗಲ್ಲಿಗೇರಿಸುವಂತೆ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂತಹ ಪ್ರಕರಣದಲ್ಲಿ ಎನ್ ಕೌಂಟರ್ ಮಾಡುವ ಕಾನೂನು ಬರಬೇಕು ಎಂದಿದ್ದಾರೆ.

ನೇಹಾ ಕೊಲೆಯನ್ನು ಸಮಾಜದ ಎಲ್ಲರೂ ಖಂಡಿಸಬೇಕು: ಶ್ರೀ ರಂಭಾಪುರಿ ಜಗದ್ಗುರು ರಂಭಾಪುರಿ ಪೀಠ

ಹುಬ್ಬಳ್ಳಿ ಕಾಲೇಜಿನ ಆವರಣದಲ್ಲಿ ನಡೆದ ನೇಹಾ ನಿರಂಜನಯ್ಯ ಹಿರೇಮಠ ಅವರ ಕೊಲೆಯನ್ನು ಸಮಾಜದಲ್ಲಿರುವ ಎಲ್ಲರೂ ಖಂಡಿಸಬೇಕು. ಆರೋಪಿಗೆ ಸರಕಾರ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಒತ್ತಾಯಿಸಿದರು.

ಕಾಲೇಜಿನ ಆವರಣದಲ್ಲಿ ಇಂಥ ಪರಿಸ್ಥಿತಿಗಳು ನಿರ್ಮಾಣವಾದರೆ ಹೆಣ್ಣು ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವುದೇ ಕಷ್ಟವಾಗುತ್ತದೆ. ಹಿಂದುಗಳು ಇ‌ನ್ನಾದರೂ ಜಾಗೃತರಾಗಿ ಇಂಥ ದುಶಕೃತ್ಯ ನಡೆದಾಗಲು ಕೂಡ ಕಣ್ಮುಚ್ಚಿ ಕುಳಿತುಕೊಳ್ಳುವುದು ನ್ಯಾಯವಲ್ಲ.

ಇದರಲ್ಲಿ ಎಲ್ಲರೂ ಜಾಗೃತರಾಗಿ ಜಾತಿ, ಮತ,ಪಂಥ ಎನ್ನದೆ ಖಂಡಿಸಬೇಕು. ಸರಕಾರ ಸೂಕ್ತ ಕ್ರಮವನ್ನು ಕೈಗೊಂಡು ಆರೋಪಿಗೆ ಗಲ್ಲು ಶಿಕ್ಷೆಯಾದರೆ ಮಾತ್ರ ನೇಹಾಗೆ ನ್ಯಾಯ ಕೊಡಿಸಿದಂತಾಗುತ್ತದೆ ಎಂದಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!