ಹೆಣ್ಣಿನ ಹಸ್ತಕ್ಷೇಪದಿಂದ ಸರ್ಕಾರಕ್ಕೆ ಕಂಟಕ ; ನಾನು ಯಾವುದನ್ನು ನಂಬಲ್ಲ ಎಂದ ಸಚಿವ ಜಾರಕಿಹೊಳಿ
ಬೆಳಗಾವಿ : ಹೆಣ್ಣಿನ ಹಸ್ತಕ್ಷೇಪದಿಂದ ಸರ್ಕಾರಕ್ಕೆ ಕಂಟಕವಾಗುತ್ತದೆ ಎಂಬ ಮೈಲಾರ ಕಾರ್ಣಿಕ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದು ಹಳೆಯದು ಇರಬಹುದು ನಾನು ಆ ರೀತಿ ನಂಬಲ್ಲ ಎಂದು ಮುಗುಳ್ನಗೆ ಬೀರಿದರು.
ಸರ್ಕಾರದಲ್ಲಿ ನನಗೆ ಯಾವುದೇ ರೀತಿಯಲ್ಲಿ ಹಿಂಸೆಯಾಗಿಲ್ಲ, ನಾನೇನು ಬಂಡಾಯ ಎದ್ದಿಲ್ಲ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸತೀಶ್ ಜಾರಕಿಹೊಳಿಗೆ ಹಿಂಸೆ ಆಗುತ್ತಿದೆ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಇವರು.
ನನಗೆ ಯಾವುದೇ ರೀತಿಯಲ್ಲಿ ಹಿಂಸೆಯಾಗಿಲ್ಲ. ಕಿರುಕುಳ ಕೂಡಾ ಇಲ್ಲ, ಒಂದುವೇಳೆ ಕಿರುಕುಳ ಆದರೆ ಹೇಳುವೆ ಎಂದರು.

