Select Page

Advertisement

ರಷ್ಯಾ ಬಾಲಕನಿಗೆ ಕಾಶಿ ಜಗದ್ಗುರುಗಳಿಂದ ದೀಕ್ಷೆ

ರಷ್ಯಾ ಬಾಲಕನಿಗೆ ಕಾಶಿ ಜಗದ್ಗುರುಗಳಿಂದ ದೀಕ್ಷೆ

ವಾರಾಣಸಿ : ಹಿಂದೂ ಧರ್ಮದ ಮೇಲೆ ಹೆಚ್ಚಿದ ಆಸಕ್ತಿ ಹಾಗೂ ಇಷ್ಟಲಿಂಗ ಪೂಜೆಯಿಂದ ಪ್ರಭಾವಿತರಾಗಿದ್ದ ರಷ್ಯಾ ಮೂಲದ ಯುವತಿ ಕಾಶಿ ಜಗದ್ಗುರುಗಳಿಂದ ಈ ಹಿಂದೆ ಲಿಂಗದೀಕ್ಷೆ ಪಡೆದಿದ್ದರು. ತಾಯಿಯ ಇಷ್ಟಲಿಂಗ ಪೂಜಾ ಕ್ರಮ ಇಷ್ಟವಾಗಿ ಇವರ ಪುತ್ರ ರಷ್ಯಾದ ಆ್ಯಂಡ್ರೆ ಎಂಬ ಎಂಟು ವರ್ಷದ ಬಾಲಕ ದೀಕ್ಷೆ ಪಡೆದುಕೊಂಡಿದ್ದಾನೆ.

ಕಾಶಿ ಜಂಗಮವಾಡಿ ಮಠದ ಜಗದ್ಗುರು ಶ್ರೀ. ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ರಷ್ಯಾದ ಬಾಲಕನಿಗೆ ಇಷ್ಟಲಿಂಗ ದೀಕ್ಷೆ ನೀಡಿದರು. ಈ ಹಿಂದೆ ರಷ್ಯಾದ ಹಲವು ಜನ ಗೋಕರ್ಣದಲ್ಲಿ ಕಾಶಿ ಜಗದ್ಗುರುಗಳಿಂದ ಲಿಂಗದೀಕ್ಷೆ ಪಡೆದಿದ್ದರು. ಇದರಲ್ಲಿ ರಷ್ಯಾದ ಮಾಸ್ಕೊ ನಿವಾಸಿ ತಮ್ಮ ಹೆಸರನ್ನು ಪಾರ್ವತಿ ಎಂದು ಬದಲಿಸಿಕೊಂಡಿದ್ದರು.

ಪಾರ್ವತಿ ಎಂಬುವವರು ದಿನನಿತ್ಯ ಮನೆಯಲ್ಲಿ ಇಷ್ಟಲಿಂಗ ಪೂಜೆ ಮಾಡುವುದನ್ನು ನೋಡಿ ಬಾಲಕ ಪ್ರೇರೆಪಿತನಾಗಿ ತಾನೂ ಪೂಜೆ ಮಾಡುವುದನ್ನು ರೂಢಿಸಿಕೊಂಡಿದ್ದ. ಇದರಿಂದ ಈತನ ಪಾಲಕರು ಕಾಶಿ ಜಗದ್ಗುರುಗಳ ಸಾನಿಧ್ಯದಲದಲ್ಲಿ ಬಾಲಕನಿಗೆ ದೀಕ್ಷೆ ಕೊಡೊಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಗಳು ಬಾಲಕನಿಗೆ ಗಣೇಶ ಎಂದು ನಾಮಕರಣ ಮಾಡಿದ್ದು, ಮಹಾರಾಷ್ಟ್ರದ ಶ್ರೀ ಗುರುಸಿದ್ಧೇಶ್ವರ ಮಣಿಕಂಠ ಶಿವಾಚಾರ್ಯರು ಬಾಲಕನಿಗೆ ಮಂತ್ರೋಪದೇಶ ಮಾಡಿದ್ದಾರೆ. ಸಧ್ಯ ರಷ್ಯಾ ಬಾಲಕನ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!