ಬೆಂಗಳೂರು : ಕಬ್ಬು ಬೆಳೆ ದರ ಹೆಚ್ಚಿಸುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಬೃಹತ್ ಪ್ರತಿಭಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ್ಯ ಶಶಿಕಾಂತ ಗುರೂಜಿ ವಿರುದ್ಧ ಸಧ್ಯ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಮಾತಿನ ಭರದಲ್ಲಿ ನಿನ್ನ ಹೆಂಡತಿ ಮಕ್ಕಳಿಗೆ ಅನ್ನ ಹಾಕಿದ ಮಾಲಿಕ ಬಂದೀನಿ ಬಾರೋ ಎಂದು ಏಕವಚನ ಪ್ರಯೋಗಿಸಿದ್ದ ಶಶಿಕಾಂತ ಗರೂಜಿ ಮಾತಾಡಿದ್ದರು. ರೈತರ ನೋವಿನ ಭರದಲ್ಲಿ ಮಾತನಾಡುವುದು ಸಾಮಾನ್ಯ ಆದರೆ ಹಿರಿಯ ರಾಜಕಾರಣಿ ಕುಟುಂಬವನ್ನು ಎಳೆದಿದ್ದು ಏಕೆ ಎಂಬ ಪ್ರಶ್ನೆಯನ್ನು ರೈತರೇ ಮಾಡಿದ್ದಾರೆ.
ರಾಜ್ಯ ಬಿಜೆಪಿ ಉದ್ಧಾರ ಆಗಬೇಕಾದರೆ ಪ್ರಹ್ಲಾದ ಜೋಶಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ರೈತರಿಗೆ ಹೆದರಿ ದೆಹಲಿಗೆ ಓಡಿ ಹೋಗಿದ್ದಾನೆ. ಇವನೆಂತ ನಾಯಕ ಎಂದು ಏಕವಚನದಲ್ಲೇ ಶಶಿಕಾಂತ ಗುರೂಜಿ ವಾಗ್ದಾಳಿ ನಡೆಸಿದ್ದರು.
ಜೊತೆಗೆ ನಿನ್ನ ಹೆಂಡತಿ ಮಕ್ಕಳಿಗೆ ಅನ್ನ ಹಾಕಿದ ಮಾಲಿಕ ಬಂದೀನಿ ಎಂಬ ಹೇಳಿಕೆ ವಿರುದ್ಧ ಸಧ್ಯ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶಶಿಕಾಂತ ಗುರೂಜಿ ವಿರುದ್ಧ ರೈತರೇ ಸಿಡಿದಿದ್ದಾರೆ. ಈ ಬೆನ್ನಲ್ಲೇ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಕ್ಷಮೆ ಕೇಳಿ ವೀಡಿಯೋ ಹರಿಬಿಟ್ಟಿದ್ದಾರೆ.




