ಅಥಣಿಯಲ್ಲಿ ದುರ್ಘಟನೆ ; ಇಬ್ಬರು ಮಕ್ಕಳು ಸಾವು
ಅಥಣಿ : ಹಳ್ಳ ದಾಟುವ ವೇಳೆ ಆಯತಪ್ಪಿ ಚಕ್ಕಡಿ ಸಮೇತ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ದೀಪಕ ಸಂಜಯ ಕಾಂಬಳೆ (9), ಗಣೇಶ ಸಂಜಯ ಕಾಂಬಳೆ (7) ಮೃತ ಬಾಲಕರು. ತಂದೆ ಜೊತೆಗೆ ಸಂಬರಗಿ ಗ್ರಾಮದಿಂದ ನಾಗನೂರ ಪಿ.ಎ ಗ್ರಾಮದ ಕಡೆಗೆ ಎತ್ತಿನ ಬಂಡಿಯಲ್ಲಿ ಸಾಗುವ ವೇಳೆ ಅಗ್ರಣಿ ಹಳ್ಳದಲ್ಲಿ ನೀರು ಬಂದ ಕಾರಣ ಮರಳು ತೆಗೆದ ಗುಂಡಿಯಲ್ಲಿ ಆಯತಪ್ಪಿ ಘಟನೆ ಸಂಭವಿಸಿದೆ.
ಘಟನೆಯಲ್ಲಿ ವೇದಾಂತ ಸಂಜಯ ಕಾಂಬಳೆ ಎಂಬ ಬಾಲಕ ಅಸ್ವಸ್ಥತಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ರಣಿ ಹಳ್ಳ ದಾಟಲು ಹೋಗಿ ಇಬ್ಬರು ಮಕ್ಕಳು ಹಾಗೂ ಎತ್ತು ಸಾವನಪ್ಪಿರುವ ಘಟನೆ ಸಂಬರಗಿ ಗ್ರಾಮದಲ್ಲಿ ನಡೆದಿದೆ.


