ಪೊಲೀಸ್ ಅಧಿಕಾರಿ ಪುತ್ರಿಯರು ಲವ್ ಜಿಹಾದ್ ಬಲೆಗೆ ; ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಪ್ರಮೋದ್ ಮುತಾಲಿಕ್
ಬೆಳಗಾವಿ : ಲವ್ ಜಿಹಾದ್ ಎಂಬ ರೋಗ ಪೊಲೀಸ್ ಅಧಿಕಾರಿಗಳನ್ನು ಬಿಟ್ಟಿಲ್ಲ. ಕರ್ನಾಟಕದ ಮೂವರು ಪೊಲೀಸ್ ಅಧಿಕಾರಿಗಳ ಪುತ್ರಿಯರು ಲವ್ ಜಿಹಾದ್ ಬಲೆಗೆ ಸಿಲುಕಿದವರನ್ನು ಶ್ರೀರಾಮ್ ಸೇನೆ ಸಂಘಟನೆ ರಕ್ಷಣೆ ಮಾಡಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಲವ್ ಜೀಹಾದ್ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು. ರಾಜ್ಯದ ಪೊಲೀಸ್ ಅಧಿಕಾರಿಗಳು ಶ್ರೀರಾಮಸೇನಾ ಸಹಾಯವಾಣಿಗೆ ಕರೆ ಮಾಡಿ ಲವ್ ಜಿಹಾದ್ ಗೆ ಬಲಿಯಾಗಿದ್ದ ತಮ್ಮ ಹೆಣ್ಣುಮಕ್ಕಳ ರಕ್ಷಣೆಗೆ ಮನವಿ ಮಾಡಿರುವ ಕರಾಳ ಘಟನೆಗಳು ನಡೆದಿವೆ. ಈ ಕುರಿತು ಯಾವ ಸರಕಾರಗಳೂ ಗಂಭೀರವಾಗಿಲ್ಲ ಎಂದರು.
ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ದೊಡ್ಡ ಚರ್ಚೆಯಾಗಿದ್ದ ದೆಹಲಿಯ ನಿರ್ಭಯಾ ಅತ್ಯಾಚಾರ ಮಾಡಿ 12 ವರ್ಷಗಳ ಬಳಿಕ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ. ಈ ನ್ಯಾಯಾಲಯದ ವ್ಯವಸ್ಥೆಗೆ ಧಿಕ್ಕಾರ ಹೇಳುತ್ತೇನೆ.
ಇಂದಿರಾ ಗಾಂಧಿ ಹತ್ಯೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರ ಮೂರು ಸಾವಿರ ಸಿಖ್ ಜನರನ್ನು ಭೀಕರವಾಗಿ ಕೊಲೆ ಮಾಡಿಸುತ್ತದೆ. ಆರೋಪಿಗಳಿಗೆ 40 ವರ್ಷಗಳ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟವಾಗುತ್ತದೆ ಎಂದರೆ ನ್ಯಾಯಾಲದ ಬಗ್ಗೆ ಗೌರವ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಲವ್ ಜಿಹಾದ್ ಅವ್ಯಾಹತವಾಗಿ ಬೆಳೆದಿದೆ. ನಮಗೆ ಜನ್ಮ ಕೊಟ್ಟ ತಾಯಿಯ ಮೇಲಾಗುತ್ತಿರುವ ಅತ್ಯಾಚಾರಗಳನ್ನು ತಡೆಯಲು ಆಗುತ್ತಿಲ್ಲ. ಕಳೆದ. 2009 ರಿಂದ ಮುದ್ರಣ ಮಾಡಿದ ಪುಸ್ತಕವನ್ನು ಮರುಮುದ್ರಣ ಮಾಡಿ ಎಲ್ಲರಿಗೂ ಲವ್ ಜಿಹಾದ್ ಬಗ್ಗೆ ತಿಳಿದುಕೊಳ್ಳಬೇಕು ಎಂದು ಪುಸ್ತಕ ಬಿಡುಗಡೆ ಮಾಡಲಾಗಿದೆ ಎಂದರು.
ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ.ಕಳೆದ 20 ವರ್ಷಗಳಿಂದ ಲವ್ ಜೀಹಾದ್ ಕುರಿತು ಹೋರಾಟ ಮಾಡಿಕೊಂಡು ಬರುತ್ತಿದೆ. ಲವ್ ಜೀಹಾದ ಬಗ್ಗೆ ಮೊದಲು ಅಪಹಾಸ್ಯ ಮಾಡಿದ್ದರು. ಈಗ ಇಡೀ ದೇಶವೇ ಲವ್ ಜೀಹಾದ್ ವಿರುದ್ಧ ಚರ್ಚೆ ಮಾಡುತ್ತಿದೆ ಎಂದರು.
ಭಯಾನಕ ರೀತಿಯಲ್ಲಿ ಕಳೆದ ಎರಡ್ಮೂರು ವರ್ಷದಲ್ಲಿ ಲವ್ ಜೀಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. 18 ವರ್ಷಕ್ಕಿಂತ ಕಡಿಮೆ ಇರುವ 46 ರಷ್ಟು ಯುವತಿಯರನ್ನು ಗುರಿಯಾಗಿಸಿಕೊಂಡು ಲವ್ ಜೀಹಾದ್ ಗೆ ಬಲಿಯಾಗುತ್ತಿದ್ದಾರೆ. ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ.
ತಾನು ಮುಸ್ಲಿಮ್ ಅಲ್ಲ ಎಂದು ತಮ್ಮ ಗುರುತನ್ನು ಮುಚ್ಚಿಟ್ಟಕೊಂಡು ಹಿಂದು ಯುವತಿಯರನ್ನು ಲವ್ ಜೀಹಾದ್ ಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಲವ್ ಜೀಹಾದ್ ಪುಸ್ತಕದಲ್ಲಿ ಮುದ್ರಿಸಲಾಗಿದೆ ಎಂದರು. ರವಿ ಕೋಕಿತ್ಕರ್, ಸುಂದ್ರೇಶ್, ಮಾಧುಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


