ಬೆಳಗಾವಿ : ಮರಳು ಸಾಗಿಸುವ ಟಿಪ್ಪರ್ ವಾಹನ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅಂಬೇವಾಡಿಯ ಯೋಗೇಶ್ ನಾವಿ (24), ನಿತೇಶ್ ತರಳೆ (27) ಮೃತ ದುರ್ದೈವಿಗಳು. ಟಿಪ್ಪರ್ ಡಿಕ್ಕಿ ಹೊದೆದ ರಭಸಕ್ಕೆ ಬೈಕ್ ಸವಾರರ ದೇಹ ಛಿದ್ರ ಛಿದ್ರವಾಗಿದೆ. ಅಪಘಾತದ ಬಳಿಕ ಟಿಪ್ಪರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



