
ಕುಂಭಮೇಳ ಕಾಲ್ತುಳಿತ ; ಬೆಳಗಾವಿಯ ನಾಲ್ವರ ಮೃತದೇಹ ಏರ್ ಲಿಫ್ಟ್….!

ಬೆಳಗಾವಿ : ಮಹಾಕುಂಭಮೇಳ ದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟ ನಾಲ್ವರ ಮೃತದೇಹಗಳನ್ನು ಏರ್ ಲಿಫ್ಟ್ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಬೆಳಗಾವಿಯಿಂದ ಮಹಾ ಕುಂಭಮೇಳಕ್ಕೆ ಹೋಗಿದ್ದವರಲ್ಲಿ ನಾಲ್ವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದರು. ಸಧ್ಯ ಮೃತದೇಹಗಳನ್ನು ಪ್ರಯಾಗರಾಜ್ ನಿಂದ ದೆಹಲಿಗೆ ಸಾಗಿಸಿ ಅಲ್ಲಿಂದ ನೇರವಾಗಿ ಬೆಳಗಾವಿಗೆ ಏರ್ ಲಿಫ್ಟ್ ಮಾಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಕಾಲ್ತುಳಿತ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕನ್ನಡಿಗರ ನೆರವಿಗೆ ನಿಲ್ಲುವ ಉದ್ದೇಶದಿಂದ ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಹಾಗೂ ಕೆಎಎಸ್ ಅಧಿಕಾರಿ ಹರ್ಷ ಅವರು ಪ್ರಯಾಗರಾಜ್ ಗೆ ತೆರಳಿದ್ದಾರೆ.
ನಗರದ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠ ( 44 ) , ಹಾಗೂ ಮಗಳು ಮೇಘಾ ಹತ್ತರವಾಠ (24). ಶೆಟ್ಟಿ ಗಲ್ಲಿಯ ಅರುಣ್ ಕೋರ್ಪಡೆ (61), ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ (48) ಮೃತ ದುರ್ದೈವಿಗಳು.
ಬುಧವಾರ ಮೌನಿ ಅಮವಾಸ್ಯೆ ಹಿನ್ನಲೆಯಲ್ಲಿ ಪವಿತ್ರ ಸ್ನಾನ ಮಾಡಲು ತ್ರಿವೇಣಿ ಸಂಗಮದ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಸೆಕ್ಟರ್ 20 ರಲ್ಲಿ ಸಂಭವಿಸಿದ್ದ ಕಾಲ್ತುಳಿದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.