ಜಮೀರ್ ಹೇಳಿಕೆಯಿಂದ ನನಗೆ ಡ್ಯಾಮೇಜ್ ಆಗಿದೆ ; ಸೋಲಿನ ಭೀತಿಯಲ್ಲಿ ಯೋಗೇಶ್ವರ್?
ಚನ್ನಪಟ್ಟಣ : ಕುಮಾರಸ್ವಾಮಿ ಹಾಗೂ ದೇವೆಗೌಡರ ಕುರಿತು ಬೈದರೆ ಸಹಿಸದ ಒಂದು ವರ್ಗ ಇದೆ. ಚುನಾವಣೆ ಸಂದರ್ಭದಲ್ಲಿ ಜಮೀರ್ ನಾಲಿಗೆ ಹರಿಬಿಟ್ಟಿದ್ದು ನನಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅಭಿಪ್ರಾಯಪಟ್ಟರು.
ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಭಲ್ಯ ಹೆಚ್ಚಾಗಿದೆ. ದೇವೆಗೌಡರ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಫಲಿತಾಂಶಕ್ಕೂ ಮೊದಲೇ ಸೈನಿಕ ಸೋಲೊಪ್ಪಿಕೊಂಡರಾ ಎಂಬ ಅನುಮಾನ ಮೂಡಿದೆ.
ಕುಮಾರಸ್ವಾಮಿ ಹಾಗೂ ದೇವೆಗೌಡರನ್ನು ಬೈದರೆ ಒಂದು ವರ್ಗ ಸಹಿಸಿಕೊಳ್ಳುವುದಿಲ್ಲ. ಈ ಹಿನ್ನಲೆಯಲ್ಲಿ ಜಮೀರ್ ಕೊಟ್ಟ ಹೇಳಿಕೆಯಿಂದ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ಸಿ.ಪಿ ಯೋಗೇಶ್ವರ್ ತಮ್ಮ ಆತಂಕ ಹೊರಹಾಕಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಜಮೀರ್ ಅಹಮ್ಮದ್ ಕುಮಾರಸ್ವಾಮಿ ಅವರಿಗೆ ಕರಿಯ ಕುಮಾರಸ್ವಾಮಿ ಎಂದು ಕರೆದಿದ್ದರು. ಜೊತೆಗೆ ದೇವೇಗೌಡರ ಕುಟುಂಬದ ರೇಟ್ ಎಷ್ಟು ಹೇಳಲಿ ಮುಸಲ್ಮಾನರು ಖರೀದಿ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು.


