ದೇವಸ್ಥಾನ ಕಾರ್ಯಕ್ರಮದಲ್ಲಿ ಯತ್ನಾಳ್ ವಕ್ಫ್ ಭಾಷಣ ; ಜನರ ಸಿಟ್ಟಿಗೆ ಕಾರ್ಯಕ್ರಮ ಬಿಟ್ಟು ಹೊರನಡೆದ ಗೌಡ್ರು
ತೇರದಾಳ : ಐತಿಹಾಸಿಕ ಕೇಂದ್ರವಾದ ತೆರದಾಳ ಪಟ್ಟಣದಲ್ಲಿ ಅಲ್ಲಮಪ್ರಭು ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ರಾಜಕೀಯ ಭಾಷಣ ಮಾಡಿದ್ದ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ಹೌದು ತೇರದಾಳ ಪಟ್ಟಣದಲ್ಲಿ ಕಳೆದ ಒಂದು ತಿಂಗಳಿನಿಂದ ನೂತನ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಜರುಗುತ್ತಿವೆ. ನಿನ್ನೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಯತ್ನಾಳ್ ವಕ್ಫ್ ವಿಚಾರ ತಗೆದಿದ್ದಾರೆ.
ಯತ್ನಾಳ್ ಬಾಯಿಯಿಂದ ವಕ್ಫ್ ವಿವಾದ ಭಾಷಣ ಹೊರಬರುತ್ತಿದ್ದಂತೆ ಸ್ಥಳದಲ್ಲೇ ಇದ್ದ ಹಿರಿಯರು ತರಾಟೆಗೆ ತಗೆದುಕೊಂಡಿದ್ದಾರೆ. ಇದು ರಾಜಕೀಯ ಭಾಷಣವಾ ಎಂದು ಯತ್ನಾಳ್ ಅವಾಜ್ ಹಾಕುದ್ದಕ್ಕೆ ಸ್ಥಳೀಯರು ಹೌದು ಇದು ರಾಜಕೀಯ ಭಾಷಣ ಎಂದು ಸಿಡಿದಿದ್ದಾರೆ.
ಜನರ ಆಕ್ರೋಶಕ್ಕೆ ಮಣಿದು ಯತ್ನಾಳ್ ಮೈಕ್ ಬಿಟ್ಟು ವೇದಿಕೆ ಇಳಿದು ಹೊರನಡೆದಿದ್ದಾರೆ. ಆದರೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜಕೀಯ ಭಾಷಣ ಎಷ್ಟು ಸರಿ ಎಂಬ ಚರ್ಚೆ ಜನರಲ್ಲಿ ಮೂಡಿತ್ತು.
ಅಲ್ಲಮಪ್ರಭು ಅವರ ಅತೀ ದೊಡ್ಡ ದೇವಸ್ಥಾನ ಇರುವುದು ತೇರದಾಳ ತಾಲೂಕಿನಲ್ಲಿ. ಕಳೆದ ಒಂದು ತಿಂಗಳಿನಿಂದ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲಾ ಧರ್ಮದ ಜನರು ಕೋಟ್ಯಾಂತರ ರೂ. ದೇಣಿಗೆ ಸೇರಿಸಿ ಕಾರ್ಯಕ್ರಮ ನಡೆಸುತ್ತಿದ್ದಾರೆ.

