ಮತ್ತೆ ನೀರಾವರಿ ಸಚಿವನಾಗಿ ಬರುತ್ತೇನೆ ; ಗುಡುಗಿದ ಸಾಹುಕಾರ
ಬೆಳಗಾವಿ : ಕಳೆದ ಸರ್ಕಾರದಲ್ಲಿ ನಾನು ನೀರಾವರಿ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಜೊತೆ ನೀರು ವಿನಿಮಯ ಒಪ್ಪಂದಕ್ಕೆ ಪ್ರಯತ್ನಿಸಿದ್ದೆ. ಆದರೆ ನಮ್ಮ ಕೆಟ್ಟ ಸಮಯ ಸಚಿವಸ್ಥಾನ ಹೋಯ್ತು. ಮತ್ತೊಮ್ಮೆ ಜಲಸಂಪನ್ಮೂಲ ಖಾತೆ ಪಡೆದು ಅದೇ ವೈಭೋಗದಲ್ಲಿ ಬರುವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಡಿಸಿಎಂ ಡಿ.ಕೆ ಶಿವಕುಮಾರ್ ಪಾರ್ಟ್ ಟೈಂ ನೀರಾವರಿ ಮಂತ್ರಿ, ಫುಲ್ ಟೈಂ ಬಿಬಿಎಂಪಿ. ಅವರೇ ಬೇಕಾದರೆ ಬೆಂಗಳೂರಿನಲ್ಲಿ ಸುತ್ತಾಡಿಕೊಂಡು ಇರಲಿ. ರಾಜ್ಯದ ಹಿತದೃಷ್ಟಿಯಿಂದ ಜಲಸಂಪನ್ಮೂಲ ಖಾತೆ ಬಿಟ್ಟುಕೊಡಲಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಸಧ್ಯ ಇರುವ ಜಲಸಂಪನ್ಮೂಲ ಸಚಿವರಿಂದ ಯಾವುದೇ ನೀರಾವರಿ ಕೆಲಸ ಆಗುತ್ತಿಲ್ಲ. ಜನರ ಹಿತದೃಷ್ಟಿಯಿಂದ ಖಾತೆ ಬಿಟ್ಟುಕೊಡಲಿ ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.
ಉಪ ಚುನಾವಣೆಯ ಮೂರು ಕ್ಷೇತ್ರದ ಪ್ರಚಾರ ಕಾರ್ಯಕ್ಕೆ ನಾವು ಹೋಗುವುದಿಲ್ಲ. ವಿಜಯೇಂದ್ರ ಅಧ್ಯಕ್ಷ ಆಗಿರುವರೆಗೆ ನಾವು ವೇದಿಕೆ ಹಂಚಿಕೊಳ್ಳುವುದಿಲ್ಲ. ಆದರೆ ಚುನಾವಣೆಯಲ್ಲಿ ಪಕ್ಷಕ್ಕೆ ಒಳಿತಾಗಲಿ ಎಂದು ಬಯಸುತ್ತೇನೆ. ಫೋನ್ ಮೂಲಕ ನಮ್ಮ ಅಭಿಮಾನಿಗಳಿಗೆ ಬಿಜೆಪಿಗೆ ಮತ ಹಾಕುವಂತೆ ಹೇಳುತ್ತೇನೆ. ಹೈಕಮಾಂಡ್ ಪ್ರಚಾರಕ್ಕೆ ಹೋಗು ಎಂದರೆ ಹೋಗುತ್ತೇನೆ. ಇಲ್ಲಿಯವರೆಗೆ ಈ ಕುರಿತು ಹೈಕಮಾಂಡ್ ಏನೂ ಹೇಳಿಲ್ಲ ಎಂದರು.
ಯಡಿಯೂರಪ್ಪ ಸರ್ಕಾರ ಬರಲು ಸಿ.ಪಿ ಯೋಗೇಶ್ವರ್ ಕಾರಣ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇವರು. ಹೌದು ಈ ಮಾತು ನೂರಕ್ಕೆ ನೂರು ಸತ್ಯ. ಸಮ್ಮಿಶ್ರ ಸರ್ಕಾರ ಕೆಡುವಲು ನಾನು ಯೋಗೇಶ್ವರ್ ಹಾಗೂ ಎನ್.ಆರ್ ಸಂತೋಷ್ ಮಹತ್ವದ ಪಾತ್ರ ವಹಿಸಿದ್ದೇವು.
ಆಗ ನಾವು ಮಂತ್ರಿಯಾಗಿ ಪ್ರಮಾಣವಚನ ಪಡೆಯುವ ಮೊದಲೇ ಸರ್ಕಾರ ಕೆಡುವುವ ಕುರಿತು ನಿರ್ಧಾರ ಮಾಡಿದ್ದೇವು. ಉಪ ಚುನಾವಣೆ ಇರುವುದರಿಂದ ಪಕ್ಷಕ್ಕೆ ಮುಜುಗರ ಆಗಬಾರದೆಂದು ನಾನು ಹೆಚ್ಚು ಮಾತನಾಡಲ್ಲ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಮಹೇಶ್ ಕುಮಠಳ್ಳಿ, ಬಿಜೆಪಿ ಮುಖಂಡ ಕಿರಣ್ ಜಾಧವ್ ಉಪಸ್ಥಿತರಿದ್ದರು.


