Select Page

ಕಾಯಕ ಕಟ್ಟೆ ಮಹಿಳಾ ಉದ್ದಿಮೆದಾರರ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ

ಕಾಯಕ ಕಟ್ಟೆ ಮಹಿಳಾ ಉದ್ದಿಮೆದಾರರ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ

ಬೆಳಗಾವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಇವರ ಸಹಯೋಗದೊಂದಿಗೆ ದೀಪಾವಳಿ ಹಬ್ಬದ ನಿಮಿತ್ತ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಕಾಯಕ ಕಟ್ಟೆ ಮಹಿಳಾ ಉದ್ದಿಮೆದಾರರ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಗೆವಿನ್ ವ್ಯಾಕ್ಸ್ಟಂ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಚಿನ್ಮಯಿ ಪ್ರವೀಣ ಅವರು ನಮ್ಮ ಸಮಾಜದ ಮಹಿಳೆಯರ ಕಲೆ ಕೌಶಲ ಎಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ ಕಾಯಕಕಟ್ಟೆ ಸಂಘಟನೆ

ಮಾಡುತ್ತಿರುವ ಕೆಲಸ ನಮ್ಮ ಸಮಾಜಕ್ಕೆ ಹೆಮ್ಮೆ ತರುವಂತಹದು. ಇದು ಕಾಯಕಕಟ್ಟೆ ಮಾದರಿಯ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಮಹಿಳಾ ಉದ್ದಿಮೆದಾರರಿಗೆ ವ್ಯವಹಾರ ಬೆಳವಣಿಗೆಗೆ ಕುರಿತು ಹಲವಾರು ವಿಚಾರಗಳನ್ನು ವ್ಯಕ್ತಪಡಿಸಿದರು.

ಮಹಾಸಭಾದ ಅಧ್ಯಕ್ಷರಾದ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಮೇಳದಲ್ಲಿ ಭಾಗವಹಿಸಿದ ಮಹಿಳಾ ಉದ್ದಿಮೆದಾರಿಗೆ ಪ್ರೋತ್ಸಾಹಕರ ಮಾತುಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂಘವು ವಿಸ್ತಾರೋನ್ನತವಾಗಿ ಬೆಳೆಯಲಿ ಮಹಾಸಭೆಯು ಎಲ್ಲ ರೀತಿಯ ಅನುಕೂಲತೆಗಳನ್ನು ಕಲ್ಪಿಸಿಕೊಡುವುದೆಂದು ತಿಳಿಸಿದರು.

ಕಾಯಕ ಕಟ್ಟೆ ಸಂಸ್ಥಾಪಕರು ಹಾಗೂ ಪ್ರಧಾನ ನಿರ್ವಾಹಕರಾದ ಶ್ರೀಮತಿ ಆಶಾ ಎಸ್ ಯಮಕನಮರಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಈ ಸಂಘಟನೆ ಬಲಗೊಳ್ಳಲು ಸಮಾಜದ ಎಲ್ಲಾ ಬಾಂಧವರ ಸಹಾಯ ಸಹಕಾರ ಅವಶ್ಯವೆಂದು ತಿಳಿಸಿದರು, ನಿರ್ವಾಹಕ ಮಂಡಳಿಯ ಸದಸ್ಯರಾದ ಶೈಲಾ ಸಂಸುದ್ದಿ ಸ್ವಾಗತ ಸುಧಾ ಪಾಟೀಲ್ ಅಥಿತಿಗಳ ಪರಿಚಯ ಮಾಡಿದರು.

ವಿದ್ಯಾ ಸವದಿ ವಂದನಾರ್ಪಣೆ ಸಲ್ಲಿಸಿದರು. ಸ್ನೇಹಾ ದೊಡ್ಡಣ್ಣವರ ನಿರೂಪಿಸಿದರು. ಮಹಾದೇವಿ ಮುಂಡಗನಾಳ ಪ್ರಾರ್ಥನೆ ಮಾಡಿದರು. ಕಾಯಕ ಕಟ್ಟೆ ವಸ್ತುಪ್ರದರ್ಶನದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದ ಸಮಾಜದ ಮಹಿಳಾ ಉದ್ದಿಮೆದಾರರು ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಕ್ಕಬಗ್ಗೆ ಸಂತಸ ವ್ಯಕ್ತಪಡಿಸಿದರು.

ಈ ವಸ್ತುಪ್ರದರ್ಶನ ಮೇಳಕ್ಕೆ ಎಲ್ಲಾ ಸಮಾಜದ ಗ್ರಾಹಕರು ಭೇಟಿ ನೀಡಿ ವಸ್ತುಗಳನ್ನು ಖರೀದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ದೀಪಾವಳಿ ಹಬ್ಬದ ವಿವಿಧ ಉಂಡಿಗಳನ್ನು, ಸಿಹಿ ತಿಂಡಿ ತಿನಿಸು, ಮಕ್ಕಳ ಉಡುಪುಗಳು, ಅಲಂಕಾರಿಕ ಗಿಡಗಳು, ರಂಗೋಲಿ, ಮುತ್ತಿನ ತೋರಣಗಳು, ಉಣ್ಣೆಯ ಬಟ್ಟೆಯ ಬ್ಯಾಗ್‌ಗಳು, ವೈವಿಧ್ಯಮಯ ವಸ್ತುಗಳನ್ನು ಖರೀದಿಸಿ ಮೇಳದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಮಾ ಕಿತ್ತೂರ, ಶ್ವೇತಾ ನರಗುಂದ, ಅಥಣಿಯ ಪಾಂಗೆ ವೈದ್ಯ ದಂಪತಿಗಳು, ತಲ್ಲೂರು ಹಾಗೂ ವಾಯ್.ಎಸ್. ಮೆಣಸಿನಕಾಯಿ, ಲಿಂಗಾಯತ ಮಹಿಳಾ ಸಮಾಜದ ಎಲ್ಲಾ ಸಹೋದರಿಯರು ಹಾಗೆ ಅನೇಕ ಗಣ್ಯ ಮಾನ್ಯರು ಆಗಮಿಸಿದ್ದರು.

Advertisement

Leave a reply

Your email address will not be published. Required fields are marked *

error: Content is protected !!