ಬೈಕ್ ಸಮೇತ ನದಿಗೆ ಬಿದ್ದ ದಂಪತಿ ; ಹುಕ್ಕೇರಿಯಲ್ಲಿ ದುರ್ಘಟನೆ
ಹುಕ್ಕೇರಿ : ದ್ವಿಚಕ್ರ ವಾಹನ ಆಯತಪ್ಪಿ ನದಿಗೆ ಬಿದ್ದು ದಂಪತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೊಗಣಿಹಾಳ ಗ್ರಾಮದಲ್ಲಿ ನಡೆದಿದೆ.
ಸೇತುವೆ ದಾಟುವಾಗ ಬೈಕ್ ಆಯತಪ್ಪಿ ವಾಹನ ಸಮೇತ ಘಟಪ್ರಭಾ ನದಿಗೆ ಬಿದ್ದು ದಂಪತಿಗಳ ಸಾವನ್ನಪ್ಪಿದ್ದಾರೆ. ಸುರೇಶ ಬಡಿಗೇರ 53, ಜಯಶ್ರೀ ಬಡಿಗೇರ 45 ಮೃತ ದಂಪತಿಗಳು ಎಂದು ತಿಳಿದು ಬಂದಿದೆ.
ಮೃತ ಜಯಶ್ರೀ ಶವವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹೋರತಗೆದಿದ್ದಾರೆ. ಸುರೇಶ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದೆ. ಸೇತುವೆಗೆ ತಡೆಗೋಡೆ ಇರದೇ ಇರುವದು ದುರ್ಘಟನೆಗೆ ಕಾರಣ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ.
ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.


