ಮೋದಿ ಯುಗ ಅಂತ್ಯ ಎಂದವರಿಗೆ ಹರಿಯಾಣ ಜನ ಕೊಟ್ಟ ಖಡಕ್ ಉತ್ತರ ಏನು…?
ಹರಿಯಾಣ : ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನ ಗೆಲ್ಲುವ ಹುಮ್ಮಸ್ಸಿನಲ್ಲಿ ಕೇವಲ 240 ಸ್ಥಾನ ಗೆದ್ದ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಯುಗ ಅಂತ್ಯ ಎಂದು ಅನೇಕರು ಬಿಂಬಿಸುತ್ತಿದ್ದರು. ಹರಿಯಾಣ ಚುನಾವಣೆಯಲ್ಲಿ ಇನ್ನೇನು ಗೆಲುವು ನಮ್ಮದೇ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್ ಗೆ ಹರಿಯಾಣದಲ್ಲಿ ಜನ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಹೌದು ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಚುನಾವಣಾ ಮತ ಎಣಿಕೆ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಲಾಗಿತ್ತು. ಇದರಂತೆ ಮುಂಬರುವ ಮಹಾರಾಷ್ಟ್ರ, ದೇಹಲಿ, ಬಿಹಾರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲ್ಲುವ ಮೂಲಕ ಮೋದಿ ಯುಗ ಮುಗಿಯಿತು ಎಂದು ಆಡಿಕೊಳ್ಳುವವರಿಗೆ ಹರಿಯಾಣ ಜನ ತಕ್ಕ ಉತ್ತರ ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 10 ಲೋಕಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿತ್ತು. ನಂತರ ಹರಿಯಾಣದಲ್ಲಿ 2014 ರಿಂದ ಸಿಎಂ ಆಗಿದ್ದ ಮನೋಹರ್ ಲಾಲ್ ಕಟ್ಟರ್ ಕೆಳಗಿಳಿಸಿ, ಹಿಂದುಳಿದ ಸಮುದಾಯದ ನಯಾಬ್ ಸಿಂಗ್ ಸೈನಿ ಅವರನ್ನು ಸಿಎಂ ಮಾಡಿತ್ತು. ಇನ್ನೇನು ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಇದೆ ಎಂಬುದರ ಮಧ್ಯೆ ಬಿಜೆಪಿ ಮತ್ತೊಮ್ಮೆ ಕಮಾಲ್ ಮಾಡಿದೆ.
ಕಳೆದ ಹತ್ತು ವರ್ಷಗಳಿಂದ ಹರಿಯಾಣದಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಸರ್ಕಾರ ರಚಿಸಲು ಸಹಕಾರಿ ಆಗಿದ್ದ ಜೆಜೆಪಿ ( ಜನನಾಯಕ ಜನತಾ ಪಾರ್ಟಿ ) ದುಶ್ಯಂತ್ ಚೌಟಾಲಾ ಅವರು ಈ ಬಾರಿ ಅಜಾದ್ ಸಮಾಜ್ ಪರ್ಟಿ ಜೊತೆ ಮೈತ್ರಿ ಮಾಡಿಕೊಂಡಿದ್ದರು ಅವರಿಗೆ ಅಷ್ಟೊಂದು ಲಾಭವಾಗಿಲ್ಲ.


